ಭಾರಿ ಗಾಳಿಯಿಂದ ಅಪಾರ ಹಾನಿ

ಬೇಲೂರು, ಜು.15- ಗಾಳಿಗೆ ತಾಲೂಕಿನ ನಾರ್ವೆ ಗ್ರಾಮ ಸಮೀಪದ ಅಬ್ಬಿಹಳ್ಳಿ ಗ್ರಾಮದಲ್ಲಿ ಮರಗಳು ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಮನೆಯಲ್ಲಿದ್ದ ಗೃಹೊಪಯೋಗಿ ವಸ್ತುಗಳು ಮತ್ತು ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ.
ತಾಲೂಕಿನ ಅರೇಹಳ್ಳಿ ಹೋಬಳಿಯೂ ಸಂಪೂರ್ಣ ಮಲೆನಾಡು ಪ್ರದೆಶವಾಗಿದ್ದು, ಇಲ್ಲಿ ದಿನನಿತ್ಯ ಬಿಡುವಿಲ್ಲದಂತೆ ಗಾಳಿ, ಮಳೆ ಬರುತ್ತಿದೆ. ಇಲ್ಲಿ ಜನ ಸಾಮಾನ್ಯರು ಓಡಾಡುವುದೇ ಕಷ್ಟಕರವಾಗಿದೆ. ಜನರು ಮನೆಯಿಂದ ಹೊರ ಬರದಂತಾಗಿದೆ. ಅಲ್ಲಲ್ಲಿ ಮನೆ ಮೇಲೆ, ರಸ್ತೆ ಇನ್ನಿತರೆಡೆ ಮರಗಳು ಬೀಳುವುದು ಸಾಮಾನ್ಯವಾಗಿದೆ. ಆದರೆ ನಿನ್ನೆ ಬಿರುಸಾದ ಗಾಳಿ ಬಂದ ಹಿನ್ನೆಲೆಯಲ್ಲಿ ಅಬ್ಬಿಹಳ್ಳಿ ಗ್ರಾಮದಲ್ಲಿ ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಮರಗಳು ಬಿದ್ದಿವೆ. ಇದರಿಂದ ಮನೆಯಲ್ಲಿನ ಗೃಹೊಪಯೋಗಿ ವಸ್ತುಗಳು ಹಾನಿಗೀಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಇತ್ತ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿರಿಂದ 2 ವಿದ್ಯುತ್ ಕಂಬಗಳು ಹಾನಿಗೀಡಾಗಿ ವಿದ್ಯುತ್ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿದ್ದವು. ಈ ಬಗ್ಗೆ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರಿಂದ ಸಿಬ್ಬಂದಿಗಳು ಲೈನ್ ಆಫ್ ಮಾಡಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಎಚ್ಚರ ವಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ