ಬರೇಲಿ, ಜು.15-ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ಕ್ರೂರಿಗಳು ನಂತರ ಆಕೆಯನ್ನು ದೇವಸ್ಥಾನವೊಂದರ ಯಾಗಸ್ಥಳದಲ್ಲಿ ಸಜೀವ ದಹನ ಮಾಡಿರುವ ಘೋರ ಕೃತ್ಯ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಮನೆ ಸಮೀಪವೇ ಇರುವ ದೇವಸ್ಥಾನದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರ ಹೆದರಿ ಕಂಗಲಾಗಿದ್ದಾರೆ. ಈ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಆಕೆಯ ಪತಿ ಘಾಜಿಯಾಬಾದ್ನಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ಶನಿವಾರ 2.30ರ ನಸುಕಿನಲ್ಲಿ ಸಂಭಾಲ್ ಜಿಲ್ಲೆಯ ರಾಜಪುರ ಪೆÇಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಮನೆಯಲ್ಲಿ ಮಲಗಿದ್ದ ಮಹಿಳೆಯನ್ನು ಅಪಹರಿಸಿ ದೇವಸ್ಥಾನದ ಹಿಂಭಾಗದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ನಂತರ ಆಕೆಯನ್ನು ದೇಗುಲದ ಯಜ್ಞಸ್ಥಳದಲ್ಲಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿ ಪರಾರಿಯಾಗಿದ್ದಾರೆ. ಈ ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ಧಾರೆ. ರಾಜಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತರಿಗಾಗಿ ಶೋಧ ನಡೆಯುತ್ತಿದೆ.