ಬೆಂಗಳೂರು, ಜು.15-ಸಬ್ ರಿಜಿಸ್ಟ್ರಾರ್ ಒಬ್ಬರನ್ನು ಕಾರಿನಲ್ಲಿ ಸಿನಿ”ುೀಯ ಶೈಲಿಯಲ್ಲಿ ಅಪಹರಿಸಿದ ನಾಲ್ವರ ತಂಡವೊಂದು 10 ಗಂಟೆಗಳ ಕಾಲ ನಗರದ ಹೊರವಲಯದಲ್ಲಿ ಸುತ್ತಾಡಿಸಿ ಹಲ್ಲೆ ನಡೆಸಿ ಬಿಡುಗಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಶಾಂತಿನಗರ ಉಪ ನೋಂದಣಾಧಿಕಾರಿ ರಂಗಸ್ವಾ”ು ಅವರು “ಲ್ಸನ್ ಗಾರ್ಡನ್ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಹರಣಕಾರರ ಪತ್ತೆಗಾಗಿ ಪೆÇಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಘಟನೆ “ವರ : ರಂಗಸ್ವಾ”ು ಅವರು ಜುಲೈ 5ರಂದು ಕೆಲಸ ಮುಗಿಸಿ ವಾಕಿಂಗ್‍ಗಾಗಿ ಲಾಲ್‍ಬಾಗ್‍ಗೆ ಶಾಂತಿನಗರದ ಕೆ.ಎಚ್.ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ, ನಾಲ್ವರು ದುಷ್ಕರ್”ುಗಳು ಕಾರಿನಲ್ಲಿ ಅಪಹರಿಸಿ ಅವರ ಮುಖಕ್ಕೆ ರಾಸಾಯನಿಕ ಸಿಂಪಡಿಸಿ ಕಣ್ಣಿಗೆ ಬಟ್ಟೆ ಕಟ್ಟಿದರು. ಸಹಾಯಕ್ಕಾಗಿ ಅವರು ಜೋರಾಗಿ ಕೂಗಿದಾಗ ದುಷ್ಕರ್”ುಗಳು ಕಾರಿನ ಮ್ಯೂಸಿಕ್ ಸಿಸ್ಟಮ್‍ನ ಶಬ್ಧವನ್ನು ಜೋರು ಮಾಡಿದರು.
ನಂತರ ಸುಮಾರು 10 ಗಂಟೆಗಳ ಕಾಲ ನಗರದ ಹೊರವಲಯದಲ್ಲಿ ಅವರನ್ನು ಸುತ್ತಾಡಿಸಿದ ಆರೋಪಿಗಳು, ಜನರನ್ನು ಶೋಸಿ ನಿಮ್ಮ ಕಚೇರಿಯ ಉದೋಗ್ಯಿಗಳಿಗೆ ಕಿರುಕುಳ ನೀಡಿತ್ತಿದ್ದೀರಾ ಎಂದು ಆರೋಪಿಸಿ ಹಲ್ಲೆ ಮಾಡಿದರು ಎಂದು ದೂರಲಾಗಿದೆ.
ಇಡೀ ರಾತ್ರಿ ಕಾರಿನಲ್ಲೇ ಅವರನ್ನು ಕರೆದೊಯ್ದು ಎಚ್ಚರಿಕೆ ನೀಡಿದ ದುಷ್ಕರ್”ುಗಳು ಜುಲೈ 6ರಂದು ಶುಕ್ರವಾರ ಮುಂಜಾನೆ ಕನಕಪುರ ರಸ್ತೆಯಲ್ಲಿರುವ ಅವರ ಮನೆ ಸ”ುೀಪ ರಂಗಸ್ವಾ”ುಯವರನ್ನು ಇಳಿಸಿ, ಜನರಿಗೆ ಮತ್ತು ಸಿಬ್ಬಂದಿಗೆ ಕಿರುಕುಳ ನೀಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಮತ್ತೊಮ್ಮೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಈ ಸಂಬಂಧ “ಲ್ಸನ್ ಗಾರ್ಡನ್ ಪೆÇಲೀಸರಿಗೆ ರಂಗಸ್ವಾ”ು ದೂರು ನೀಡಿದ್ದಾರೆ.
ಕಣ್ಣಿಗೆ ಬಟ್ಟೆ ಕಟ್ಟಿದ್ದ ಕಾರಣ ಸಬ್ ರಿಜಿಸ್ಟ್ರಾರ್ ಅವರಿಗೆ ದುಷ್ಕರ್”ುಗಳ ಬಗ್ಗೆ ಮತ್ತು ಕಾರಿನ ಸಂಖ್ಯೆ ಬಗ್ಗೆ ಹೆಚ್ಚಿನ “ವರಗಳು ಲಭಿಸಿಲ್ಲ. ತಮ್ಮನ್ನು ಯಾವ ಉದ್ದೇಶಕ್ಕಾಗಿ ಅಪಹರಿಸಲಾಗಿದೆ ಎಂಬ ಬಗ್ಗೆ ತಮಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪೆÇಲೀಸರು ಸಿಸಿಟಿ” ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ದುಷ್ಕರ್”ುಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.