ಬೆಂಗಳೂರು, ಜು.15- ಏಕನಾಯಕತ್ವದ ಮೊರೆ ಹೋಗಿ ವೈಫಲ್ಯ ಅನುಭ”ಸಿದ ಕಾಂಗ್ರೆಸ್, ಕೆಟ್ಟ ಮೇಲೆ ಬುದ್ದಿ ಕಲಿತಿದ್ದು, ಮತ್ತೊಮ್ಮೆ ಸಾಮೂ”ಕ ನಾಯಕತ್ವದ ಜಪ ಮಾಡಲು ಆರಂಭಿಸಿದೆ.
ಕಾಂಗ್ರೆಸ್‍ನ ಈವರೆಗಿನ ಇತಿಹಾಸದಲ್ಲಿ ಒಂದೆರಡು ಅವಧಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಲಮಾನದಲ್ಲೂ ಸಾಮೂ”ಕ ನಾಯಕತ್ವದಲ್ಲೇ ಚುನಾವಣೆಗಳನ್ನು ಎದುರಿಸಿತ್ತು.
ಆದರೆ, ಇತ್ತೀಚೆಗೆ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ನಲ್ಲಿ ಅತ್ಯಂತ ಪ್ರಬಲ ನಾಯಕರಾಗಿ ಹೊರ ಹೊ”್ಮುದ ನಂತರ ಕಳೆದ “ಧಾನಸಭೆ ಚುನಾವಣೆಯನ್ನು ಸಾಮೂ”ಕ ನಾಯಕತ್ವದ ಬದಲಾಗಿ ಏಕ ನಾಯಕತ್ವದಡಿ ಎದುರಿಸಲಾುತು.
ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ಲಿಖಿತ ಆದೇಶವನ್ನೂ ಜಾರಿ ಮಾಡಿದ್ದರು. ಆದರೆ, “ಧಾನಸಭೆ ಚುನಾವಣೆಯಲ್ಲಿ ಇದು ನಿರೀಕ್ಷಿತ ಯಶಸ್ಸು ನೀಡಲಿಲ್ಲ. 134 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟಿಕೊಂಡಿದ್ದ ಕಾಂಗ್ರೆಸ್ 79 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾುತು.
“ೀಗಾಗಿ ಹೈಕಮಾಂಡ್, ಸಿದ್ದರಾಮಯ್ಯ ಕಾಲದಲ್ಲಿ ನಂಬಿಕೆ ಕಳೆದುಕೊಂಡಂತೆ ಕಾಣುತ್ತಿದೆ. “ಧಾನಸಭೆ ಚುನಾವಣೆಗೂ ಮೊದಲು ತೀವ್ರ “ರೋಧದ ನಡುವೆಯೂ ಹೈಕಮಾಂಡ್ ವರಿಷ್ಠರು ಸಿದ್ದರಾಮಯ್ಯ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದರು.
ಇದರಿಂದ “ರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ಜಾಫರ್ ಶರೀಫ್ ಅವರಂತಹ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಪರಿಣಾಮವಾಗಿ ನಿರೀಕ್ಷೆಯಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.
ಈಗ ಮತ್ತೆ “ಂದಿನ ಸಂಪ್ರಾದಾುಕ ಶೈಲಿಯಂತೆ ಸಾಮೂ”ಕ ನಾಯಕತ್ವದಲ್ಲೇ ಚುನಾವಣೆ ಎದುರಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳಲಾರಂಭಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಲೋಕಸಭೆ ಚುನಾವಣೆಯನ್ನು ಸಾಮೂ”ಕ ನಾಯಕತ್ವದಲ್ಲೇ ಎದುರಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್‍ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್, ನಾನೂ ಸೇರಿದಂತೆ ಹಾಗೂ ಸಿದ್ದರಾಮಯ್ಯನವರೂ ಇರುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಸಾಮೂ”ಕ ನಾಯಕತ್ವ ಎದುರಿಸಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬಲವಾಗಿ ನೆಚ್ಚಿಕೊಂಡಿದ್ದಕಾಂಗ್ರೆಸ್ ಇದ್ದಕ್ಕಿದ್ದ ಹಾಗೆ ತನ್ನ ನಿಲುವು ಬದಲಿಸಿರುವುದು ಸಿದ್ದರಾಮಯ್ಯ ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
“ಧಾನಸಭೆ ಚುನಾವಣೆಯ ನಂತರ ಸೋಲಿನ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಯಾವುದೇ ಹುದ್ದೆಯ ನಿರೀಕ್ಷೆ ಮಾಡದೆ ತಮ್ಮ ಪಾಡಿಗೆ ತಾವು ರಾಜಕಾರಣ ಮಾಡುತ್ತಿದ್ದಾರೆ.
ಅವರ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ತಾನೇ ಖುದ್ದಾಗಿ ಸಮನ್ವಯ ಸ”ುತಿಯ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡಿದೆ. ಈಗ ಸಾಮೂ”ಕ ನಾಯಕತ್ವ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ಕಾಡಲಾರಂಭಿಸಿದೆ.