ರಾಯ್‍ಪುರ್, ಜು.15-ಛತ್ತೀಸ್‍ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಮುಂದುವರಿದಿದ್ದು, ಮಾವೋವಾದಿಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಬಿಎಸ್‍ಎಫ್‍ನ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ಛತ್ತೀಸ್‍ಗಢದ ಶಂಕರ್ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಬಿಎಸ್‍ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಎನ್‍ಕೌಂಟರ್ ನಡೆಯಿತು.
ಈ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದು, ಕೆಲವು ಯೋಧರಿಗೆ ಗಂಭೀರ ಗಾಯಗಳಾಗಿವೆ.
ಎನ್‍ಕೌಂಟರ್ ನಡೆದ ಸ್ಥಳವು ಪಾರ್ತಪುರ್ ಪೆÇಲೀಸ್ ಠಾಣೆಯ ಸರಹದ್ದಿನ ಪ್ರದೇಶವಾಗಿದೆ. ಬಿಎಸ್‍ಎಫ್‍ನ 114ನೇ ಬೆಟಾಲಿಯನ್ ನಕ್ಸಲರ ಶೋಧ ಕಾರ್ಯಾಚರಣೆ ನಂತರ ಕ್ಯಾಂಪ್‍ಗೆ ಹಿಂದಿರುಗುತ್ತಿದ್ದಾಗ ಮಾವೋವಾದಿಗಳು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯಿತು.
ಬಿಎಸ್‍ಎಫ್ ಕ್ಯಾಂಪ್ ಮೇಲೆಯ ದೊಡ್ಡ ಮಟ್ಟದ ದಾಳಿ ನಡೆಸಲು ನಕ್ಸಲರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.