ಬೆಂಗಳೂರು, ಜು.14- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಮಾನ್‍ಸೂನ್ ಋತುವಿನ ವಿಶೇಷಾರ್ಥವಾಗಿ ಪ್ರವಾಸ ಪ್ಯಾಕೇಜ್ ನೀಡಲಿದೆ. ಪ್ರವಾಸಿಗರಿಗೆ ಮಯೂರ ಗ್ರೂಪ್ ಆಫ್ ಹೋಟೆಲ್ಸ್‍ನಲ್ಲಿ ತಂಗಲು ಶೇ.20, ಶೇ.30ರವರೆಗೆ ರಿಯಾಯಿತಿ ನೀಡುತ್ತಿದೆ.
ಕೊಡುಗು-ಮಡಿಕೇರಿ, ಭಾಗಮಂಡಲ, ಮೈಸೂರು, ಬೃಂದಾವನ ಉದ್ಯಾನವನ, ಶ್ರೀರಂಗಟ್ಟಣ, ಶಿವಮೊಗ್ಗ ಜೋಗಫಾಲ್ಸ್, ಚಿತ್ರದುರ್ಗ, ಬೇಲೂರು-ಹಳೇಬೀಡು, ಭರಚುಕ್ಕಿ, ಸಂಗಮ-ಮೇಕೆದಾಟು, ಊಟಿ, ಬಾದಾಮಿ, ಟಿಬಿ ಪ್ರವಾಸಿಗರಿಗೆ ಅತ್ಯುತ್ತಮ ವಾತಾವರವನ್ನು ಕಲ್ಪಿಸುತ್ತಿದೆ.
ರಾಜ್ಯಾದ್ಯಂತ ಹಾಗೂ ಹೊರ ರಾಜ್ಯದ ಊಟಿಯಲ್ಲಿ ಕೆಎಟಿಡಿಸಿಯ ಮಯೂರ ಹೋಟೆಲ್‍ಗಳು ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೌಲಭ್ಯಗಳ ಸೇವೆಯನ್ನು ಒದಗಿಸುತ್ತಿದ್ದು, ಪ್ರವಾಸಿಗರು ಈ ರಿಯಾಯಿತಿಯನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಮಯೂರ ಗ್ರೂಪ್ ಆಫ್ ಹೋಟೆಲ್ ಜತೆಗೆ ಕೆಎಸ್‍ಟಿಯು ಪ್ರವಾಸ ಪ್ಯಾಕೇಜ್‍ಗಳನ್ನು ಕೂಡ ನಿರ್ವಹಿಸುತ್ತಿದ್ದು , ಮನ್ಸೂನ್ ವಿಶೇಷವಾಗಿ ಸಿಗಂಧೂರು-ಜೋಗ ಜಲಪಾತಕ್ಕೆ ಎರಡು ದಿನಗಳ ಪ್ರವಾಸ ಹಾಗೂ ಶಿವನಸಮುದ್ರ ಮತ್ತು ತಲಕಾಡಿಗೆ ಒಂದು ದಿನದ ಪ್ರವಾಸ ಕೈಗೊಂಡಿದೆ.
ಸಿಗಂಧೂರು ಚೌಡೇಶ್ವರಿ ದರ್ಶನ,ವಿಶ್ವವಿಖ್ಯಾತ ಜೋಗಜಲಪತ ವೀಕ್ಷಣೆ ಸೇರಿದಂತೆ ಶರಾವತಿಸಾಹನ ಶಿಬಿರಕ್ಕೆ ಭೇಟಿ ನೀಡುವ ಪ್ರವಾಸ ಪ್ಯಾಕೇಜ್‍ಗೆ ಪ್ರತಿಯೊಬ್ಬರಿಗೆ 2150 ಆಗಲಿದೆ. ಅದೇ ರೀತಿ ಗಗನಚುಕ್ಕಿ ಜಲಪಾತ, ಭರಚುಕ್ಕಿಯ ಮಧ್ಯರಂಗ ದೇವಸ್ಥಾನ ದರ್ಶನ, ತಲಕಾಡು ಮತ್ತು ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸ ಪ್ಯಾಕೇಜ್ ಪ್ರತಿಯೊಬ್ಬರಿಗೆ 800 ರೂ. ಆಗಲಿದ್ದು, ವಾರಂತ್ಯಕ್ಕೆ ಸೀಮಿತವಾಗಿದೆ.
ಬೇಡಿಕೆ ಹೆಚ್ಚಾದಂತೆ ಈ ಪ್ರವಾಸ ಪ್ಯಾಕೇಜ್‍ಗಳನ್ನು ವಾರದ ದಿನಗಳಲ್ಲೂ ನಿರ್ವಹಣೆ ಮಾಡುವ ಉದ್ದೇಶ ಸಂಸ್ಥೆ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಬುಕ್ಕಿಂಗ್‍ಗಾಗಿ ನಿಗಮದ ಅಧಿಕೃತ ವೆಬ್‍ಸೈಟ್ ಡಿಡಿಡಿ.hoಠಿb್ಚ.್ಚಟಗೆ ಭೇಟಿ ನೀಡಲು ಅಥವಾ ಮೊ:8970650070/8970650075 ಸಂಪರ್ಹಿಸಬಹುದಾಗಿದೆ ಎಂದು ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ.