ಬೆಂಗಳೂರು, ಜು.14-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರಿನಿಂದ ತಿರುಪತಿ-ತಿರುಮಲಕ್ಕೆ ಪ್ಯಾಕೆಜ್ ಟೂರ್‍ಗಳನ್ನು ಜು.20ರಿಂದ ಪ್ರಾರಂಭಿಸುತ್ತಿದೆ.
ಮಂಗಳೂರಿನಿಂದ ಮಧ್ಯಾಹ್ನ 12 ಗಂಟೆಗೆ ತಿರುಪತಿಗೆ ಐರಾವತ ಬಸ್ ಹೊರಡಲಿದೆ. ವಯಸ್ಕರಿಗೆ 5100 ಹಾಗೂ ಮಕ್ಕಳಿಗೆ 4100ರೂ.ಗಳಾಗಿದ್ದು, ವಾರಾಂತ್ಯದಲ್ಲಿ 300ರೂ.ಗೆ ಏರಿಕೆಯಾಗಲಿದೆ.
ದಾವಣಗೆರೆಯಿಂದ ಚಿತ್ರದುರ್ಗದ ಹಾಗೂ ಶಿವಮೊಗ್ಗದಿಂದ ಭದ್ರಾವತಿ ಮಾರ್ಗದಲ್ಲಿ ಸಂಜೆ 4 ಗಂಟೆಗೆ ಬಸ್ ತಿರುಪತಿಗೆ ಹೊರಡಲಿದ್ದು, ವಯಸ್ಕರಿಗೆ 4500, ಮಕ್ಕಳಿಗೆ 3600 ರೂ. ಇದ್ದು, ವಾರಾಂತ್ಯದಲ್ಲಿ 300ರೂ. ಹೆಚ್ಚಳವಾಗಲಿದೆ.
ಹೋಟೆಲ್‍ನಲ್ಲಿ ಪ್ರೆಶಪ್, ಪದ್ಮಾವತಿ ದೇವಿ ದರ್ಶನ, ತಿರುಪತಿ ತಿರುಮಲಕ್ಕೆ ಎಪಿಎಸ್‍ಆರ್‍ಟಿಸಿ ಸಾರಿಗೆ ವ್ಯವಸ್ಥೆ ಹಾಗೂ ತಿಮ್ಮಪ್ಪನ ಶೀಘ್ರ ದರ್ಶನ, ತಿರುಪತಿಯಲ್ಲಿರುವ ಸ್ಥಳೀಯ ದೇವಸ್ಥಾನಗಳ ದರ್ಶನ, ಕಾಳಹಸ್ತಿಯಲ್ಲಿ ದೇವರ ದರ್ಶನ ಹಾಗೂ ಊಟದ ವ್ಯವಸ್ಥೆಯನ್ನು ಪ್ಯಾಕೆಜ್ ಒಳಗೊಂಡಿದೆ.
ಮೈಸೂರಿನಿಂದ ತಿರುಪತಿಗೆ ಸಂಜೆ 7.30ಕ್ಕೆ ಬಸ್ ಹೊರಡಲಿದ್ದು, ವಯಸ್ಕರಿಗೆ 3100 ಹಾಗೂ ಮಕ್ಕಳಿಗೆ 2200ರೂ. ಇದ್ದು, ವಾರಾಂತ್ಯದಲ್ಲಿ 200ರೂ. ಹೆಚ್ಚಳವಾಗಲಿದೆ.
ಮೈಸೂರು-ತಿರುಪತಿ ಪ್ಯಾಕೆಜ್‍ನಲ್ಲಿ ಹೋಟೆಲ್‍ನಲ್ಲಿ ಪ್ರೆಶಪ್, ಪದ್ಮಾವತಿ ದೇವಿ ದರ್ಶನ, ಉಪಹಾರ ಹಾಗೂ ತಿರುಪತಿ ದರ್ಶನ ವ್ಯವಸ್ಥೆ ಇದೆ.
ಹೆಚ್ಚಿನ ಮಾಹಿತಿಗೆ ದೂ.ಸಂ.7760990034/35 ಅಥವಾ 080-49596666 ಸಂಪರ್ಕಿಸಲು ಕೆಎಸ್‍ಆರ್‍ಟಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.