ಮಂಡ್ಯ: ಕೆಆರ್ ಎಸ್ ಜಲಾಶಯ ಭರ್ತಿಯಾಗಲು ಇನ್ನೂ 2 ಅಡಿ ಬಾಕಿ ಇದ್ದು, 122 ಅಡಿ ತಲುಪಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 41961 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 4044 ಕ್ಯೂಸೆಕ್ ಇದೆ.
ಜಲಾಶಯದಲ್ಲಿ ಒಟ್ಟು 46.567 ಟಿಎಂಸಿ ನೀರು ಶೇಖರಣೆಯಾಗಿದೆ. ಜಲಾಶಯ ಭರ್ತಿಯಾಗುತ್ತಿರುವುದಕ್ಕೆ ರೈತರು ಸಂತಸಗೊಂಡಿದ್ದಾರೆ. ಅಧಿಕಾರಿಗಳು ನದಿಗೆ ನೀರು ಹರಿಸಲು ತೀರ್ಮಾನಿಸಿದ್ದು, ನದಿಯ ಎರಡೂ ದಂಡೆಯ ರೈತರಿಗೆ ಸುರಕ್ಷತಾ ಸ್ಥಳಕ್ಕೆ ತೆರಳಲು ಸೂಚನೆ ನೀಡಿದ್ದಾರೆ.
ಕಳೆದ ವರ್ಷ ಈ ಸಮಯದಲ್ಲಿ ಕೇವಲ 78.45 ಅಡಿ ನೀರಿತ್ತು. ಈ ಬಾರಿ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಉಕ್ಕಿ ಹರಿಯುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಹೇಳಿದ್ದಾರೆ.