ಬೆಂಗಳೂರು, ಜು.14- ಬಾಬ ಸಾಹೇಬ ಅಂಬೇಡ್ಕರ್ ಅವರ ಕೊಡುಗೆ, ಹೋರಾಟದ ಫಲವಾಗಿ ಇಂದು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ದೊರೆಯುತ್ತಿದೆ. ವಿಶ್ವೇಶ್ವರಯ್ಯ ಕಟ್ಟಿದ ಕಾಲೇಜಿನಲ್ಲಿ ಎಲ್ಲರೂ ಉತ್ತಮ ನಾಯಕರಾಗಿ, ಕ್ರೀಡಾಪಟುಗಳಾಗಿ, ವಿದ್ಯಾವಂತರಾಗಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹಾರೈಸಿದರು.
ಬೆಂಗಳೂರು ವಿವಿಯ ಯುವಿಸಿಇ ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ/ಪಂಗಡದ 262 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಮಾತನಾಡಿದ ಅವರು, ಹಳ್ಳಿಯಿಂದ ಬಂದು ಇಂದು ಯಶಸ್ವಿ ಮಟ್ಟಕ್ಕೆ ಏರುತ್ತಿದ್ದೀರಿ ಎಂದರೆ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದರು.
ಬಸವಲಿಂಗಪ್ಪನವರ ಕಾಲದಲ್ಲಿ ಜೀತಪದ್ಧತಿ ತುಂಬಾ ಇದುದ್ದರಿಂದ ಆ ನೋವಿನಲ್ಲೇ ಬದುಕಿ ಸರಿಯಾದ ಹೊತ್ತಿಗೆ ಊಟ ಇಲ್ಲದೆ ಮೈ ತುಂಬ ಬಟ್ಟೆ ಇಲ್ಲದೆ ಬದುಕಿ ಬಾಳಿದ್ದರು. ಶಿಕ್ಷಣದ ಅರವಿನಿಂದ ಇವತ್ತು ಸಮಾನತೆ ಸಾಧ್ಯವಾಗಿದೆ ಎಂದರು.
ಅಂಬೇಡ್ಕರ್‍ರವರು ಒಬ್ಬನಿಗೆ ಒಂದೇ ಮತದಾನದ ಹಕ್ಕು ಎಂದು ಮತದಾನ ಹಾಕುವವರನ್ನು ಬುದ್ಧಿವಂತರನ್ನಾಗಿ ಮಾಡಿದ್ದಾರೆ. ಇದರಿಂದ ಒಳ್ಳೆಯ ಮಂತ್ರಿ ಆರಿಸುವ ಹಕ್ಕು ದೊರೆತಿದೆ ಎಂದು ಸಚಿವರು ಹೇಳಿದರು.
ಬೆಂಗಳೂರು ವಿವಿ ಕುಲಪತಿ ಪೆÇ್ರಫೆಸರ್ ಡಾ.ಕೆ.ಆರ್.ವೇಣುಗೋಪಾಲ್‍ಮಾತನಾಡಿ,ಯುವಿಸಿಇ ಶತಮಾನೋತ್ಸವಕ್ಕೆ ಸುಮಾರು 25 ಕೋಟಿ ಜಾರಿಯಾಗಿತ್ತು. ಇದು ಕಡಿಮೆ ಎಂದೆನಿಸುತ್ತಿದೆ. ಮುಂದಿನ ಬಜೆಟ್‍ಗೆ 150 ಕೋಟಿ ಜಾರಿಗೊಳಿಸಬೇಕೆಂದುವಿದ್ಯಾರ್ಥಿ ಪರವಾಗಿ ಮನವಿ ಮಾಡಿದರು.
ಕಾಲೇಜಿನಲ್ಲಿ ಖಾಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಿದರೆ ಇನ್ನೂ ಉನ್ನತಕ್ಕೆ ಹೋಗುತ್ತದೆ ಎಂದು ಸಲಹೆ ಮಾಡಿದರು.
ಯುವಿಸಿಇ ಕಾಲೇಜನ್ನು ಅಟೊನೊಮಸ್ ಮಾಡಬೇಕೆಂದು ಮನವಿ ಕೋರುತ್ತಾ ಕುಲಪತಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ.ಹೆಚ್.ಯು. ತಳವಾರ್, ಯುವಿಸಿಇ ಪ್ರಾಂಶುಪಾಲ ಡಾ.ಎಚ್.ಎನ್.ರಮೇಶ್, ಕುಲಸಚಿವರಾದ ಡಾ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಶಿವರಾಜ್, ವಿತ್ತಾಧಿಕಾರಿ ಡಾ.ಎ.ಲೋಕೇಶ್, ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ ಸಿಂಹ. ಎನ್ ಹಾಗೂ ಶಿವಣ್ಣ.ಬಿ,ಯುವಿಸಿಇ ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.