ಬೆಂಗಳೂರು,ಜು.13- ಕೌಶಲ್ಯಗಳ ಕೊರತೆಯಿಂದ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿರುವ ಇಂದಿನ ಯುವ ಜನರಲ್ಲಿ ಕೌಶಲ್ಯ ಅಭಿವೃದ್ದಿಗಾಗಿ ಸರ್ಕಾರದೊಂದಿಗೆ ಸ್ಥಳೀಯ ಕಾಪೆರ್Çೀರೇಟ್ ಸಂಸ್ಥೆಗಳು ಹಾಗೂ ಉದ್ದಿಮೆಗಳ ಸಹಯೋಗದೊಂದಿಗೆ ಉದ್ಯೋಗ ಕಲ್ಪಿಸಲು ಲೇಬರ್ ನೆಟ್ ಮುಂದಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಗಾಯತ್ರಿ ವಾಸುದೇವನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.15ರಂದು ವಿಶ್ವ ಕೌಶಲ್ಯ ದಿನದ ಸಂದರ್ಭದಲ್ಲಿ ಆರೋಗ್ಯ ಶುಶ್ರೂಷೆ ಮತ್ತು ಮೂಲಭೂತ ಸೌಕರ್ಯಗಳ ಉಪಕರಣಗಳ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಯೋಜನೆ ಪ್ರಕಟಿಸಲಿದ್ದು, ಅದರಂತೆ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ ಎಂದರು.
ಇಲ್ಲಿಯವರೆಗೆ ಲೇಬರ್ ನೆಟ್ ಸಂಸ್ಥೆ ಆರ್ಯುವೇದ್ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಏಳು ಲಕ್ಷ ಭಾರತೀಯರಿಗೆ ತರಬೇತಿ ನೀಡಿದ್ದು ,2022ರ ವೇಳೆಗೆ 10 ದಶಲಕ್ಷ ಯುವಜನರ ಜೀವನದ ಮೇಲೆ ಕೌಶಲ್ಯಾಭಿವೃದ್ದಿಯಿಂದ ಪ್ರಭಾವ ಬೀರುವ ಗುರಿ ಹೊಂದಿದೆ. ಆರೋಗ್ಯ ಶುಶ್ರೂಷೆ ಮತ್ತು ಮೂಲಭೂತ ಉಪಕರಣಗಳ ಕ್ಷೇತ್ರದಲ್ಲಿಯೂ ತರಬೇತಿ ನೀಡಲು ಯೋಜನೆ ರೂಪಿಸಿರುವ ಲೇಬರ್ ನೆಟ್, ಈ ಮೂಲಕ ಸಹಸ್ರಾರು ಯುವಕರಿಗೆ ಭಾರತ ಹಾಗೂ ವಿದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಲು ಶ್ರಮಿಸಲಿದೆ.
ಒಂದು ವರ್ಷದ ಕಲಿಕಾ ತರಬೇತಿ ಕಾರ್ಯಕ್ರಮವನ್ನು ಸಂಸ್ಥೆ ಹಮ್ಮಿಕೊಂಡಿದೆ ಎಂದು ವಿವರಿಸಿದರು.