ನ್ಯಾಟಿಗ್ಯಾಮ್: ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಮಾರಾಕ ದಾಳಿ ಹಾಗೂ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ತಂಡ 49.5 ಓವರ್ಗಳಲ್ಲಿ 268ರನ್ಗಳಿಗೆ ಆಲೌಟ್ ಆಯಿತು. ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾದ ಜೆಸನ್ ರಾಯ್ ಮತ್ತು ಜಾನಿಬೈರ್ಸ್ಟೋ ಉತ್ತಮ ಆರಂಭ ನೀಡಿ 73ರನ್ ಸೇರಿಸಿದ್ರು. ಆದ್ರೆ ನಂತರ ಕುಲ್ದೀಪ್ ಮ್ಯಾಜಿಕ್ಗೆ ಆಂಗ್ಲ ಬ್ಯಾಟ್ಸ್ ಮನ್ಗಳು ತತ್ತರಿಸಿಹೋದ್ರು.
ಕುಲ್ದೀಪ್ಗೆ ಆರು ವಿಕೆಟ್
ಜೆಸನ್ ರಾಯ್, ಜಾನಿ ಬೈರ್ಸ್ಟೊ , ಜೋ ರೂಟ್, ಬೆನ್ಸ್ಟೋಕ್ಸ್, ಜೋಸ್ ಬಟ್ಲರ್ ಮತ್ತು ಡೇವಿಡ್ ವಿಲ್ಲಿ ಕುಲ್ದೀಪ್ ಗೆ ವಿಕೆಟ್ ನಡೆಸಿ ಹೊರ ನಡೆದ್ರು. ಜೋ ರೂಟ್ ಮತ್ತು ಜೆಸ ನ್ ರಾಯ್ ತಲಾ ಅರ್ಧ ಶತಕ ಬಾರಿಸಿ ಮಿಂಚಿದ್ರು. ಕೊನೆಯಲ್ಲಿ ಇಂಗ್ಲೆಂಡ್ 49.5 ಓವರ್ಗಳಲ್ಲಿ 268ರನ್ಗಳಿಗೆ ಆಲೌಟ್ ಆಯಿತು. ಕುಲ್ದೀಪ್ ಆರು ವಿಕೆಟ್ ಪಡೆದು ಮಿಂಚಿದ್ರು.
269ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ 59ರನ್ಗಳ ಉತ್ತಮ ಆರಂಭ ನೀಡಿದ್ರು. ಧವನ್ 40ರನ್ ಗಳಿಸಿದ್ದಾಗ ಮೊಯಿನ್ ಅಲಿ ಎಸೆತದಲ್ಲಿ ಔಟ್ ಆದ್ರು. ಒಂದನೇ ಕ್ರಮಾಂಕದಲ್ಲಿ ಆಗಮಿಸಿದ ಕೊಹ್ಲಿ ರೋಹಿತ್ಗೆ ಉತ್ತಮ ಸಾಥ್ ನೀಡಿ 167 ರನ್ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನ ಖಚಿತ ಪಡಿಸಿದ್ರು. ರೋಹಿತ್ ಶರ್ಮಾ ಆಕರ್ಷಕ ಶತಕ ಬಾರಿಸಿ ಏಕದಿನ ಕ್ರಿಕೆಟ್ನಲ್ಲಿ 18ನೇ ಶತಕ ಪೂರೈಸಿದ್ರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 268 (49.5 ಓವರ್)
ಜೆಸನ್ ರಾಯ್ 38, ಜಾನಿ ಬೈರ್ ಸ್ಟೊ 38
ಬೆನ್ ಸ್ಟೋಕ್ಸ್ 50, ಜೋಸ್ ಬಟ್ಲರ್ 53
ಕುಲ್ದೀಪ್ ಯಾದವ್ 25ಕ್ಕೆ 6, ಉಮೇಶ್ ಯಾದವ್ 70ಕ್ಕೆ 2
ಭಾರತ 40.1 ಓವರ್ಗಳಲ್ಲಿ 269/ 2
ರೋಹಿತ್ ಶರ್ಮಾ 137, ವಿರಾಟ್ ಕೊಹ್ಲಿ 75
ಶಿಖರ್ ಧವನ್ 40 , ಕೆ.ಎಲ್. ರಾಹುಲ್ ಅಜೇಯ 9
ಮೊಯಿನ್ ಅಲಿ 60ಕ್ಕೆ 1, ಆದಿಲ್ ರಶೀದ್ 62ಕ್ಕೆ 1