![suryagrahana](http://kannada.vartamitra.com/wp-content/uploads/2018/07/suryagrahana-568x381.jpg)
ಹೊಸದಿಲ್ಲಿ: ಸುಮಾರು 43 ವರ್ಷಗಳ ಬಳಿಕ ವಿಶೇಷ ಭಾಗಶಃ ಸೂರ್ಯ ಗ್ರಹಣ ಇಂದು ಸಂಭವಿಸುತ್ತಿದೆ.
43 ವರ್ಷಗಳ ಬಳಿಕ ತಿಂಗಳ 13 ರಂದು ಮತ್ತು ಶುಕ್ರವಾರದ ದಿನವೇ ಸೂರ್ಯಗ್ರಹಣ ನಡೆಯುತ್ತಿರುವುದೇ ವಿಶೇಷ. 1974, ಡಿಸೆಂಬರ್ 13ರ ಶುಕ್ರವಾರ ಇದೇ ರೀತಿ ಭಾಗಶಃ ಸೂರ್ಯಗ್ರಹಣ ಸಂಭವಿಸಿತ್ತು. ಕೆಲವು ದೇಶಗಳಲ್ಲಿ 13 ಮತ್ತು ಶುಕ್ರವಾರಕ್ಕೆ ಸಂಬಂಧಿಸಿ ಮೂಢನಂಬಿಕೆಗಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ನಲ್ಲಿ ಮಾತ್ರ ಗ್ರಹಣ ವೀಕ್ಷಣೆಗೆ ಲಭ್ಯವಿದ್ದು, ಇದು ಭಾರತದಲ್ಲಿ ಗೋಚರವಾಗುವುದಿಲ್ಲ. ಆದ್ರೆ ಅಮವಾಸ್ಯೆ ದಿನವಾಗಿರೋದ್ರಿಂದ ಮನುಕುಲದ ಮೇಲೆ ಪ್ರಭಾವ ಬೀರುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7.18 ರಿಂದ 8.31ರವರೆಗೆ ಗ್ರಹಣವಿರಲಿದೆ.
ಭಾರತೀಯರೂ ನೋಡಬಹುದು:
ಭಾರತದಲ್ಲಿ ಸೂರ್ಯಗ್ರಹಣ ಕಾಣದಿದ್ದರೂ ಭಾರತೀಯರು ನಾಸಾ ವೆಬ್ಸೈಟ್ ನ ಲೈವ್ ಸ್ಟ್ರೀಮಿಂಗ್ ಹಾಗೂ ಯೂಟ್ಯೂಬ್ ಮೂಲಕ ಕಣ್ತುಂಬಿಕೊಳ್ಳಬಹುದು. ಬೆ ಜಗತ್ತಿನ ಬೇರೆ ದೇಶಗಳಲ್ಲಿಯೂ ಈ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ. ಹಾಗೇನಾದರೂ ಬರಿಗಣ್ಣಿನಿಂದ ನೋಡಿದರೆ ದರಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ನ್ಯೂಯಾರ್ಕ್ ಹೇಯ್ಡೆನ್ ಪ್ಲಾನೆಟೇರಿಯಂನ ಸಹಾಯಕ ಜೋ ರಾವ್ ತಿಳಿಸಿದ್ದಾರೆ.