ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು 28 ಸಾವಿರ ಬೆಲೆಯ ಐ ಫೆÇೀನ್ ಎಗರಿಸಿ ಪರಾರಿ

 

ಬೆಂಗಳೂರು, ಜು.13- ಮನೆ ಮುಂದೆ ಮಾತನಾಡುತ್ತ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು 28 ಸಾವಿರ ಬೆಲೆಯ ಐ ಫೆÇೀನ್ ಎಗರಿಸಿ ಪರಾರಿಯಾಗಿರುವ ಘಟನೆ ಜೆಪಿ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೆಪಿ ನಗರದ ಮಾರೇನಹಳ್ಳಿ ನಿವಾಸಿ ಅಕ್ಷಯ್ ರಾಮ್ ಎಂಬುವವರು ರಾತ್ರಿ 8.45ರಲ್ಲಿ ಮನೆ ಮುಂದೆ ಮಾತನಾಡುತ್ತ ನಿಂತಿದ್ದರು.
ಈ ವೇಳೆ ಇಬ್ಬರು ದರೋಡೆಕೋರರು ದಾರಿಯಲ್ಲಿ ಸಂಚರಿಸುವ ಹಾಗೆ ನಟಿಸಿ ಇವರ ಕೈಲಿದ್ದ ದುಬಾರಿ ಬೆಲೆಯ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಈ ಬಗ್ಗೆ ಜೆಪಿ ನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ