ಲಂಡನ್: ಇದೊಂದು ನಿಜ ಜೀವನದಲ್ಲಿ ನಡೆದ ಸಿನಿಮೀಯ ಪ್ರಸಂಗ….ಇತ್ತ, ಪತಿ ಜೈಲು ಸೇರುತ್ತಿದ್ದರೆ, ಅತ್ತ, ಒಂದು ತಿಂಗಳಿಂದ ಕೋಮಾದಲ್ಲಿದ್ದ ಪತ್ನಿ ಕಣ್ಣು ಬಿಟ್ಟಿದ್ದಾಳೆ!
ಹೌದು, ಈ ರಿಯಲ್ ಕಹಾನಿ ಪಾಕಿಸ್ತಾನದ ಮಾಜಿ ಪಧಾನಿ ನವಾಜ್ ಷರಿಫ್ ಮತ್ತವರ ಪತ್ನಿ ಕುಲ್ಸೂಮ್ ನವಾಜ್ ಅವರದ್ದು….
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಪ್ರಧಾನಿ ಸ್ಥಾನದಿಂದ ಪದಚ್ಯುತಿಗೊಂಡಿರುವ ನವಾಜ್ ಷರೀಫ್ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣದಲ್ಲಿ ನವಾಜ್ ಷರೀಫ್ ಮಾತ್ರವಲ್ಲ ಪುತ್ರಿ ಮರಿಯಂ ನವಾಜ್ ಕೂಡ 7 ವರ್ಷ ಸೆರೆವಾಸಕ್ಕೆ ಅನುಭವಿಸಬೇಕಿದೆ. ಈ ನಡುವೆ ಪತ್ನಿ ಕುಲ್ಸೂಮ್ ನವಾಜ್ ಒಂದು ತಿಂಗಳಿಂದ ಕೋಮಾಗೆ ಜಾರಿದ್ದರು.
ಇಂದು ಅಪ್ಪ-ಮಗಳು ಇಬ್ಬರೂ ಪಾಕ್ ಪೊಲೀಸರಿಗೆ ಶರಣಾಗಲು ಲಂಡನ್ನಿಂದ ಲಾಹೋರ್ಗೆ ಪ್ರಯಾಣಿಸಿದ್ದಾರೆ. ಇದೇ ವೇಳೆ, ಕೋಮಾದಲ್ಲಿದ್ದ ಕುಲ್ಸೂಮ್ ನವಾಜ್ ಸುದೀರ್ಘ ಒಂದು ತಿಂಗಳ ಬಳಿಕ ಕಣ್ಣು ಬಿಟ್ಟಿದ್ದಾರೆ. ಆದರೆ, ಅವರು ಏನ್ನನ್ನೂ ಹೇಳಿ ಕೊಂಡಿಲ್ಲ. ಈ ವಿಷಯವನ್ನು ಕುಲ್ಸೂಮ್ ಮಗ ಹುಸೇನ್ ನವಾಜ್ ಖಚಿತ ಪಡೆಸಿದ್ದಾರೆ. ಅಲ್ಲದೇ, ಕುಲ್ಸೂಮ್ ಚೇತರಿಕೆಗಾಗಿ ಪ್ರಾರ್ಥಿಸುವಂತೆ ಮಗ ಜನತೆಯಲ್ಲಿ ಕೇಳಿಕೊಂಡಿದ್ದಾರೆ.