ಬೆಂಗಳೂರು: ಬಜೆಟ್ ಪಾಸಾದರೂ ಸಮನ್ವಯ ಸಮಿತಿ ಮುಖಸ್ಥರಿಗೆ ಇನ್ನು ಕ್ಯಾಬಿನೆಟ್ ಸ್ಥಾನಮಾನ ಸಿಗಲಿಲ್ಲ. ಇದರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಬಗ್ಗೆ ತಲೆಕೆಡಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಸಮ್ಮಿಶ್ರ ಸರ್ಕಾರ ರಚನೆಯಾಗಿ ಇಷ್ಟು ದಿನಗಳಾದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇನ್ನು ಅಧಿಕೃತ ಸ್ಥಾನಮಾನ ಸಿಗಲಿಲ್ಲ. ಬಜೆಟ್ ಪಾಸಾದರು ಸರ್ಕಾರ ಮಟ್ಟದಲ್ಲಿ ಇನ್ನೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ರಚನೆಯಾಗಿಲ್ಲ. ಇದರಿಂದ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡುವುದಕ್ಕೆ ಸಿಎಂ ಕುಮಾರಸ್ವಾಮಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಕುಮಾರಸ್ವಾಮಿ ಅವರು ಸರ್ಕಾರದಿಂದಲೇ ಸಮನ್ವಯ ಸಮಿತಿ ರಚಿಸುವುದಾಗಿ ಒಪ್ಪಿಕೊಂಡಿದ್ದರು. ಸರ್ಕಾರದಿಂದ ಅಧಿಕೃತ ಆದೇಶವಾದರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಗುತ್ತಿತ್ತು. ಆದರೆ ಈಗ ಸಮನ್ವಯ ಸಮಿತಿ ರಚನೆಗೆ ಸಿಎಂ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಸಿಎಂ ಕುಮಾರಸ್ವಾಮಿ ವಿಳಂಬ ನೀತಿಗೆ ಸಿದ್ದರಾಮಯ್ಯಗೆ ಪೀಕಲಾಟ ಶುರುವಾಗಿದೆ. ಆದರೂ ಸಿದ್ದರಾಮಯ್ಯ ತಮ್ಮ ಅಸಮಾಧಾನ ಹೊರಹಾಕಲಾಗದೇ ಸುಮ್ಮನಿದ್ದಾರೆ ಎಂದ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.