
ತುಮಕೂರು,ಜು.12- ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ರಂಗಯ್ಯನಪಾಳ್ಯ ಬಳಿ ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ ದಾಟುತ್ತಿರುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆತ ಪಕ್ಕದ ರಸ್ತೆಗೆ ಎಗರಿ ಬಿದ್ದಿದ್ದಾನೆ. ಈ ವೇಳೆ ತುಮಕೂರಿನಿಂದ ಬಂದ ವಾಹನವೊಂದು ಆತನ ಮೇಲೆ ಹರಿದಿದ್ದು, ಗುರುತು ಪತ್ತೆಯಾಗದಷ್ಟು ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಮಧುಸೂಧನ್, ಸಬ್ಇನ್ಸ್ಪೆಕ್ಟರ್ ಪರಿಶೀಲನೆ ನಡೆಸಿಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ಸವಾರ ಸಾವು: ಕುಣಿಗಲ್-ತುಮಕೂರು ರಸ್ತೆಯ ಗುಳೂರು ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ ಅತೀ ವೇಗವಾಗಿ ಬಂದ ಬೈಕ್ ಸವಾರ ಆಯತಪ್ಪಿ ಹಂಪ್ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಎಸ್.ಎಸ್.ಪುರದಗುರುಮೂರ್ತಿ(45) ಸಾವನ್ನಪ್ಪಿರುವ ದುರ್ದೈವಿ.
ಈ ಸಂಬಂಧ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.