![iStock_000042392778_Small](http://kannada.vartamitra.com/wp-content/uploads/2018/07/iStock_000042392778_Small-572x381.jpg)
ನವದೆಹಲಿ,ಜು.12- ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‍ಮಹಲ್ ಸಂರಕ್ಷಣೆ ಕುರಿತು ನಿರ್ಲಕ್ಷ್ಯ ತೋರಿರುವ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ತಾಜ್ ಸಂರಕ್ಷಣೆಯ ಬಗ್ಗೆ ಸಂಸದೀಯ ಸಮಿತಿ ವರದಿಯಿದ್ದರೂ, ಆ ಪ್ರಕಾರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ನ್ಯಾ. ಎಂ.ಬಿ. ಲೋಕೂರ್ ನ್ಯಾಯಪೀಠ ವಿಷಾಧ ವ್ಯಕ್ತಪಡಿಸಿದೆ.
ತಾಜ್‍ಮಹಲ್ ಸಂರಕ್ಷಣೆಯ ದೃಷ್ಟಿಕೋನವುಳ್ಳ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾದ ಉತ್ತರ ಪ್ರದೇಶ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೋರ್ಟ್, ತಾಜ್‍ಮಹಲ್‍ನ್ನು ಮುಚ್ಚಿ, ಇಲ್ಲವೇ ಉರುಳಿಸಿ ಎಂದು ಖಾರವಾಗಿ ನುಡಿದಿದೆ. ತಾಜ್‍ಮಹಲ್ ಇರುವ ಆಗ್ರಾ ಕೈಗಾರಿಕಾ ವಲಯಕ್ಕೆ ಸಮೀಪವಾಗಿದೆ, ಇಲ್ಲಿ ಕಳೆದ 30 ವರ್ಷಗಳಲ್ಲಿ ಮಾಲಿನ್ಯಮಟ್ಟ ತೀವ್ರವಾಗಿ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಆಗ್ರಾ ವಿಶ್ವದ ಅತ್ಯಂತ ಕಳಪೆ ವಾಯು ಹೊಂದಿರುವ ನಗರಗಳಲ್ಲಿ ಎಂಟನೇ ಸ್ಥಾನದಲ್ಲಿದೆ.