![Dh4y-bdV4AA5Zoi](http://kannada.vartamitra.com/wp-content/uploads/2018/07/Dh4y-bdV4AA5Zoi-678x380.jpeg)
ಪುಣೆ,ಜು.12- ಸಾಧು ವಾಸ್ವಾನಿ ಮಿಷನ್ನ ಮುಖ್ಯಸ್ಥ ಹಾಗೂ ಪ್ರಖ್ಯಾತ ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ(99) ಇಂದು ವಿಧಿವಶರಾಗಿದ್ದಾರೆ. ಪಾಕಿಸ್ಥಾನದ ಹೈದರಾಬಾದ್ನಲ್ಲಿ ಸಿಂಧಿ ಕುಟುಂಬದಲ್ಲಿ 1918ರ ಆಗಸ್ಟ್ 2ರಂದು ಜನಸಿದ್ದರು. ದಾದಾ ವಾಸ್ವಾನಿ ಎಂದೇ ಪ್ರಖ್ಯಾತರಾಗಿದ್ದ ಇವರು ಅನಾರೋಗ್ಯ ಕಾರಣ ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇಂದು ಬೆಳಗ್ಗೆ ಅವರು ಮಿಷನ್ ಕೇಂದ್ರದಲ್ಲಿ ಇಹಲೋಕ ತ್ಯಜಿಸಿದ್ದಾರೆ.