
ಬೆಂಗಳೂರು,ಜು.12- ಪ್ರತಿಯೊಬ್ಬರ ಪ್ರಾಣಕ್ಕೂ ಬೆಲೆಯಿದೆ. ಅಪರಾಧಗಳು ನಡೆಯಲೇ ಬಾರದು ಎಂಬುವುದು ನನ್ನ ಅಭಿಪ್ರಾಯ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವರಾಜ್ಕುಮಾರ್ ಯಶ್ ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣವೂ ಮುಖ್ಯ. ಸ್ವಲ್ಪ ಸಂಶಯವೂ ಬಂದ ಕೂಡಲೇ ಪೆÇಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತನ್ನ ವಿರುದ್ದ ಹತ್ಯೆಗೆ ಸಂಚುಗಳು ನಡೆದಿವೆ ಎಂಬ ಅನುಮಾನಗಳು ವ್ಯಕ್ತವಾದ ಕೂಡಲೇ ಪೆÇಲೀಸರಿಗೆ ಸುದ್ದಿ ತಿಳಿಸಬೇಕೆಂದು ಶಿವರಾಜ್ಕುಮಾರ್ ಪ್ರತಿಕ್ರಿಯಿಸಿದರು.