ಎಸ್‍ಬಿಐ ಕ್ರೆಡಿಟ್ ಕಾರ್ಡುದಾರರಿಗೆ ವಂಚನೆ

ಹೈದರಾಬಾದ್, ಜು.12-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(ಎಸ್‍ಬಿಐ) 2,000ಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡುದಾರರಿಗೆ ಐದು ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ 22 ಟೆಲಿ ಕಾಲರ್‍ಗಳೂ ಸೇರಿದಂತೆ 30 ಜನರನ್ನು ಬಂಧಿಸಲಾಗಿದೆ.
ಈ ನಕಲಿ ಕ್ರೆಡಿಟ್ ಕಾರ್ಡ್ ವಂಚನೆ ಜಾಲದ ರೂವಾರಿ ವಿಜಯಕುಮಾರ್ ಶರ್ಮ ಕೂಡ ಬಂಧಿತರಲ್ಲಿ ಸೇರಿದ್ದಾನೆ. ಬಂಧಿತ ಟೆಲಿಕಾಲರ್‍ಗಳಲ್ಲಿ ಬಹುತೇಕ ಯುವತಿಯರು. ಇವರು ಹಣದ ಆಮಿಷಕ್ಕೆ ಒಳಗಾಗಿ ಇತರ ಆರೋಪಿಗಳಿಗೆ ನೆರವಾಗಿದ್ದಾರೆ. ಎಸ್‍ಬಿಐ ಕ್ರೆಡಿಟ್ ಕಾರ್ಡ್ ವಿಭಾಗದ ಸಿಬ್ಬಂದಿ ಎಂದು ಹೇಳಿಕೊಂಡು ಗ್ರಾಹಕರಿಗೆ ಕರೆ ಮಾಡುತ್ತಿದ್ದ ಈ ವಂಚಕರು, ಕಾರ್ಡ್ ಇತ್ಯಾದಿ ವಿವರಗಳನ್ನು ಸಂಗ್ರಹಿಸುತ್ತಿದ್ದರು. ನಂತರ ಆನ್‍ಲೈನ್ ಪೆÇೀರ್ಟಲ್ ಮೂಲಕ ಅಕ್ರಮ ಹಣಕಾಸು ವಹಿವಾಟುಗಳನ್ನು ನಡೆಸುತ್ತಿದ್ದರು. ಈ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಪೆÇಲೀಸರು ಕಾರ್ಯಪ್ರವೃತ್ತರಾದಾಗ ವಂಚನೆಯ ವ್ಯವಸ್ಥಿತ ಜಾಲ ಪತ್ತೆಯಾಯಿತು ಎಂದು ಹೈದರಾಬಾದ್ ನಗರ ಪೆÇಲೀಸ್ ಕಮಿಷನರ್ ವಿ.ಸಿ.ಸಜ್ಜನರ್ ತಿಳಿಸಿದ್ದಾರೆ.
ಫೆಬ್ರವರಿ ತಿಂಗಳಿನಿಂದ ವಿಜಯ್‍ಕುಮಾರ್ ಶರ್ಮ ಹಾಗೂ ಇತರ ಇಬ್ಬರು ಪ್ರಮುಖ ಆರೋಪಿಗಳು 22 ಮಂದಿ ಟೆಲಿಕಾಲರ್‍ಗಳನ್ನು ನಿಯೋಜಿಸಿಕೊಂಡು ಎಸ್‍ಬಿಐ ಹೆಸರಿನಲ್ಲಿ ನಕಲಿ ಕ್ರೆಡಿಟ್ ಕಾರ್ಡ್ ಕಾಲ್ ಸೆಂಟರ್ ನಡೆಸುತ್ತಿದ್ದರು. ಒಟಿಪಿ ಸೇರಿದಂತೆ ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದು ವಂಚನೆಗಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಇವರು ಈವರೆಗೆ 2,000ಕ್ಕೂ ಅಧಿಕ ಕಾರ್ಡುದಾರರಿಗೆ 5 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸಿದ್ಧಾರೆ ಎಂದು ಸಜ್ಜನರ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ