ನ್ಯೂಯಾರ್ಕ್, ಜು.12-ಅಮೆರಿಕದ 60 ಅತ್ಯಂತ ಶ್ರೀಮಂತೆ ಸ್ವಯಂ-ಸಾಧಕಿಯರ ಫೆÇೀಬ್ರ್ಸ್ ಪಟ್ಟಿಯಲ್ಲಿ ಭಾರತೀಯ ಮೂಲದ ತಂತ್ರಶಿಲ್ಪಿಗಳಾದ ಜಯಶ್ರೀ ಉಲ್ಲಾಳ್ ಮತ್ತು ನೀರಜಾ ಸೇಥಿ ಸ್ಥಾನ ಪಡೆದಿದ್ದಾರೆ.
21 ವರ್ಷದ ಟೆಲಿವಿಷನ್ ತಾರೆ ಮತ್ತು ಯಶಸ್ವಿ ಮಹಿಳಾ ಉದ್ಯಮಿ ಕೈಲೀ ಜೆನ್ನರ್ ಅತ್ಯಂತ ಕಿರಿಯ ಸಿರಿವಂತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1.3 ಶತಕೋಟಿ ಡಾಲರ್ ಆಸ್ತಿ ಹೊಂದಿರುವ ಜಯಶ್ರೀ ಉಲ್ಲಾಳ್(57 ವರ್ಷ) 60 ಅತ್ಯಂತ ಸಿರಿವಂತೆಯರ ಪಟ್ಟಿಯಲ್ಲಿ 18ನೇ ಸ್ಥಾನದ್ದಲಿದ್ದರೆ, ಒಂದು ಶತಕೋಟಿ ಡಾಲರ್ ಮೌಲ್ಯದ ಒಡತಿ ನೀರಜಾ ಸೇಥಿ(60 ವರ್ಷ) 21ನೇ ಕ್ರಮಾಂಕದಲ್ಲಿದ್ದಾರೆ.