ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ-2018 ಫೈನಲ್

ಮಾಸ್ಕೋ, ಜು.12-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ-2018ರ ಫೈನಲ್‍ನಲ್ಲಿ ಜುಲೈ 15, ಭಾನುವಾರದಂದು ಫ್ರಾನ್ಸ್ ಮತ್ತು ಕ್ರೊವೇಷ್ಯಾ ತಂಡಗಳು ಸೆಣಸಲಿದ್ದು, ಮೂರನೇ ಸ್ಥಾನಕ್ಕಾಗಿ ಜು.14ರಂದು ಬೆಲ್ಜಿಯಂ ಮತ್ತು ಇಂಗ್ಲೆಂಡ್ ನಡುವೆ ಹಣಾಹಣಿ ನಡೆಯಲಿದೆ.
ಮೊದಲ ಸೆಮಿಫೈನಲ್ಸ್‍ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂ ಹಾಗೂ ಎರಡನೇ ಉಪಾಂತ್ಯದಲ್ಲಿ ಕ್ರೊವೇಷ್ಯಾ ಎದುರು ಇಂಗ್ಲೆಂಡ್ ಪರಾಭವಗೊಂಡಿದೆ. ಮೂರನೇ ಸ್ಥಾನಕ್ಕಾಗಿ ಬೆಲ್ಜಿಯಂ ಮತ್ತು ಇಂಗ್ಲೆಂಡ್ ನಡುವೆ ಶನಿವಾರ ತೀವ್ರ ಪೈಪೆÇೀಟಿಗೆ ವೇದಿಕೆ ಸಜ್ಜಾಗಿದೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳು ಎನಿಸಿದ್ದ ಬೆಲ್ಜಿಯಂ ಮತ್ತು ಇಂಗ್ಲೆಂಡ್ ಫೈನಲ್‍ಗೇರುವ ಮಹತ್ವಾಕಾಂಕ್ಷೆ ಈಡೇರಲಿಲ್ಲ. ಸೆಮಿಫೈನಲ್ಸ್‍ನಲ್ಲಿ ಸೋತು ಸುಣ್ಣವಾಗಿರುವ ಈ ಎರಡು ತಂಡಗಳಿಗೆ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಈ ಎರಡೂ ತಂಡಗಳಲ್ಲೂ ಬಲಿಷ್ಠ ಅಟಗಾರರಿದ್ದು, ಗೆಲುವಿನ ಫಲಿತಾಂಶ ಅಪಾರ ಕುತೂಹಲ ಕೆರಳಿಸಿದೆ. ಕ್ರೀಡಾ ಪಂಡಿತರ ಪ್ರಕಾರ ಬೆಲ್ಜಿಯಂ ಶೇ.44ರಷ್ಟು ಗೆಲುವಿನ ಸಂಭವವಿದ್ದರೆ, ಇಂಗ್ಲೆಂಡ್ ಜಯದ ಸಾಧ್ಯತೆ ಶೇ.30ರಷ್ಟು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ