![kuwait_accident](http://kannada.vartamitra.com/wp-content/uploads/2018/04/kuwait_accident-610x381.jpg)
ಅಮೇಠಿ,ಜು.12- ಕಾರು ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರು ಸೇರಿ ಐವರು ಸಾವನ್ನಪ್ಪಿರುವ ಘಟನೆ ಜಗದೀಶಪುರ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಸಂಜೆ ಫೈಜಾಬಾದ್-ರಾಯಬರೇಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಹಳಿಯಾಪುರ್ ಕ್ರಾಸ್ನಲ್ಲಿ ಕಾರು ಬರುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಸಾಜನ್ ಲಾಲ್(40), ರಮೇಶ್ವರ್ ಪ್ರಸಾದ್ ಪಾಂಡೆ(62) ರಾಜ್ ಕರಣ್ ಪಾಂಡೆ(53), ಚಾಲಕ ರಾಮ್ಕುಮಾರ್(40), ಹನುಮಾನ್ ಪ್ರಸದ್(40) ಮೃತಪಟ್ಟಿದ್ದು, ಇವರೆಲ್ಲರೂ ಸರೆಸಾರ್ ಗ್ರಾಮದವರು ಎಂದು ಪೆÇಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಘಟನೆ ನಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಜಗದೀಶಪುರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.