ಸಾರಿಗೆ ಸೆಸ್‍ಗೆ ಬಿಬಿಎಂಪಿ ಸದಸ್ಯರ ವಿರೋಧ

 

ಬೆಂಗಳೂರು, ಜು.12- ಟ್ರಾನ್ಸ್‍ಪೆÇೀರ್ಟ್ (ಸಾರಿಗೆ) ಸೆಸ್ ವಿಧಿಸುವುದಕ್ಕೆ ಬಿಬಿಎಂಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ನಾಗಕರಿಗೆ ತೆರಿಗೆಗಳ ಮೇಲೆ ತೆರಿಗೆ ಹೊರಿಸವುದು ಸರಿಯಲ್ಲ ಎಂದು ಸದಸ್ಯರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಮೇಲೆ ಸೆಸ್ ವಿಧಿಸುವುದು ಸುಲಭದ ಕೆಲಸವಲ್ಲ. ಈ ರೀತಿಯ ಪ್ರಸ್ತಾವನೆ ಬಿಬಿಎಂಪಿಗೆ ಬಂದಿಲ್ಲ. ಈ ವಿಷಯ ಪಾಲಿಕೆ ಕೌನ್ಸಿಲ್‍ನಲ್ಲಿ ಚರ್ಚೆಯಾಗಬೇಕು ಎಂದು ಮೇಯರ್ ಸಂಪತ್‍ರಾಜ್ ಹೇಳಿದ್ದಾರೆ.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸಾರಿಗೆ ಸೆಸ್ ವಿಧಿಸುವ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮೇಯರ್, ಸಾರಿಗೆ ಸೆಸ್ ವಿಚಾರ ಗೊತ್ತಾಗಿದೆ. ಆದರೆ ಅಧಿಕೃತ ಪ್ರಸ್ತಾವನೆ ಬಂದಿಲ್ಲ. ಒಂದು ವೇಳೆ ಬಂದರೆ ಇದನ್ನು ಕೌನ್ಸಿಲ್‍ನಲ್ಲಿಟ್ಟು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ರಸ್ತೆ ಗುಂಡಿಗಳಿಂದಲೇ ಬಸ್‍ಗಳು ಹಾಳಾಗುತ್ತಿವೆ ಎಂದು ಹೇಳುವುದಕ್ಕಾಗೊಲ್ಲ. ಬಸ್‍ಗಳ ಸಂಚಾರದಿಂದಾಗಿಯೇ ರಸ್ತೆಗಳು ಹಾಳಾಗುತ್ತಿವೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದರು.
ಸಾರಿಗೆ ಸೆಸ್ ಬಗ್ಗೆ ಸಚಿವರು ಹೇಳಿರುವುದು ಗಮನಕ್ಕೆ ಬಂದಿದೆ. ಬಿಎಂಟಿಸಿ ಬಸ್‍ಗಳ ಓಡಾಟದಿಂದ ನಗರದ ರಸ್ತೆಗಳು ಹಾಳಾಗುತ್ತಿವೆ ಎಂಬುದರ ಬಗ್ಗೆ ನಮ್ಮ ಕೌನ್ಸಿಲ್‍ನಲ್ಲಿ ಸಾಕಷ್ಟು ಬಾರಿ ಚರ್ಚೆಗಳು ಆಗಿವೆ. ನಮ್ಮ ರಸ್ತೆಗಳು ಗುಣಮಟ್ಟದಿಂದ ಕೂಡಿವೆ ಎಂದು ಸಮರ್ಥಿಸಿಕೊಂಡರು.
ಈಗಾಗಲೇ ಜನರಿಂದ ಹಲವಾರು ಸೆಸ್ ಪಡೆಯಲಾಗುತ್ತಿದೆ. ಈಗ ಮತ್ತೊಂದು ತೆರಿಗೆ ಭಾರ ಹೊರಿಸುವುದು ಸರಿಹೋಗುವುದಿಲ್ಲ ಎಂದು ಪಾಲಿಕೆ ಸದಸ್ಯರು ಸೆಸ್ ವಿಧಿಸುವ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಬಸ್‍ಗಳಲ್ಲಿ ಜಾಹಿರಾತುಗಳಿವೆ. ಮೊದಲು ಅವುಗಳ ತೆರಿಗೆಯನ್ನು ಕಟ್ಟಲಿ ಆನಂತರ ಸಾರಿಗೆ ಸೆಸ್ ಬಗ್ಗೆ ಪ್ರಸ್ತಾಪ ಮಾಡಲಿ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ತಲೆಗೆ ಯಾರೋ ಹುಳ್ಳ ಬಿಟ್ಟಿದ್ದಾರೆ ಅನಿಸುತ್ತಿದೆ. ಸಾರಿಗೆ ಸೆಸ್ ವಿಧಿಸುವುದು ಸರಿಯಲ್ಲ. ಇಂಥ ಪ್ರಸ್ತಾವ ಬಂದರೆ ನಾವು ವಿರೋಧಿಸುತ್ತೇವೆ ಎಂದು ಬಹಳಷ್ಟು ಸದಸ್ಯರು ಅಸಮಾಧಾನದಿಂದ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ