
ಗದಗ,ಜು.12- ಜಿಲ್ಲೆಯ ರೋಣ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಖೆ ಅಧಿಕಾರಿ ಎಸ್.ಹೆಚ್. ರಡ್ಡೆರ ಅವರ ಮನೆ ಮತ್ತು ಕಚೇರಿ ಮೇಲೆ ಇಂದು ಬೆಳ್ಳಂಬೆಳ್ಳಗೆ ಎಸಿಬಿ ದಾಳಿ ನಡೆಸಿದೆ.
ಎಸಿಬಿ ಅಧಿಕಾರಿಗಳಾದ ಆನಂದ್ ವನಕುದರಿ ಹಾಗೂ ಮಂಜುನಾಥ್ ಕುಸುನಲ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆಯಲ್ಲಿ ಹಲವು ಮಹತ್ವದ ಕಡತಗಳನ್ನುಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಕ್ರಮ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.