ಭದ್ರತಾ ಪಡೆಗಳ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ

ಶ್ರೀನಗರ, ಜು.12-ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ.
ಕುಪ್ವಾರ ಜಿಲ್ಲೆಯ ತ್ರೆಹ್ಲಾಮ್ ಪ್ರದೇಶದಲ್ಲಿ ಸೇನೆ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತ್ತಿದ್ದ ಉಗ್ರಗಾಮಿಗಳು ಯೋಧರ ಮೇಲೆ ಗುಂಡು ಹಾರಿಸಿದರು.
ನಂತರ ಕಾರ್ಯಾಚರಣೆ ತೀವ್ರಗೊಳಿಸಿದ ಸೇನಾಪಡೆ ಸ್ಥಳವನ್ನು ಸುತ್ತುವರಿದು ಭಯೋತ್ಪಾದಕರ ಮೇಲೆ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು. ಈ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದು, ಆತನ ಬಳಿಯಿದ್ದ ಶಸ್ತಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರೆನೇಡ್ ದಾಳಿ, ಯೋಧರಿಗೆ ಗಾಯ : ಈ ಮಧ್ಯೆ, ಶೋಪಿಯಾನ್ ಜಿಲ್ಲೆಯ ಅಹ್ಲಾಮ್ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದ ಸೇನಾ ಪಡೆಗಳ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ಆಕ್ರಮಣದಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆ. ದಾಳಿ ನಡೆಸಿ ಪರಾರಿಯಾಗಿರುವ ಯೋಧರಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ