ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ಕಿರುಕುಳ ನೀಡುತ್ತಿಲ್ಲ – ಸಚಿವ ಆರ್.ಶಂಕರ್

 

ಬೆಂಗಳೂರು, ಜು.11-ಅರಣ್ಯ ಪ್ರದೇಶಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ಕಿರುಕುಳ ನೀಡುತ್ತಿಲ್ಲ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್.ಶಂಕರ್ ವಿಧಾನಪರಿಷತ್‍ನಲ್ಲಿ ಸಮರ್ಥಿಸಿಕೊಂಡರು.
ಪ್ರಶ್ನೋತ್ತರ ಕಲಾಪದಲ್ಲಿ ಆರ್.ಪ್ರಸನ್ನಕುಮಾರ್ ಪರವಾಗಿ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಅರಣ್ಯ ಒತ್ತುವರಿಯನ್ನು ತಡೆಯುವ ಸಂಬಂಧ ನಿಯಮಾನುಸಾರ ಹಾಗೂ ಕಾನೂನುಬದ್ಧವಾಗಿ ಅರಣ್ಯಾಧಿಕಾರಿಗಳು ಕ್ರಮತೆಗೆದುಕೊಳ್ಳುತ್ತಿದ್ದಾರೆ. ಆದರೆ ಯಾವುದೇ ಕಿರುಕುಳ ನೀಡುತ್ತಿಲ್ಲ. ಅನಗತ್ಯ ಕಿರುಕುಳ ನೀಡುತ್ತಿರುವುದು ಕಂಡುಬಂದರೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಅರಣ್ಯವಾಸಿಗಳ ಹಕ್ಕುಗಳನ್ನು ಕಾಪಾಡಲೆಂದೇ 2006 ಮತ್ತು 2008ರ ನಿಯಮವನ್ನು ಜಾರಿಗೊಳಿಸಲಾಗಿದೆ. ಅದರ ಅನ್ವಯ ಅಲ್ಲಿನ ನಿವಾಸಿಗಳ ಹಕ್ಕನ್ನು ಕಾಪಾಡಲಾಗುತ್ತಿದೆ. ಅರಣ್ಯಾಧಿಕಾರಿಗಳು ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 80518 ಅರ್ಜಿಗಳು ಸ್ವೀಕೃತವಾಗಿದ್ದು ಇದರಲ್ಲಿ 2506 ಪ್ರಕರಣಗಳಲ್ಲಿ ಅರಣ್ಯ ಹಕ್ಕುಪತ್ರ ನೀಡಲಾಗಿದೆ. 43042 ಅರ್ಜಿಗಳು ವಿವಿಧ ಹಂತದ ಅರಣ್ಯ ಹಕ್ಕುಗಳ ಸಮಿತಿಯಲ್ಲಿ ತಿರಸ್ಕøತಗೊಂಡಿವೆ. ಉಳಿದ ಅರ್ಜಿಗಳು ಪರಿಶೀಲನೆಗೆ ಬಾಕಿ ಇರುತ್ತವೆ.
ಅಧಿನಿಯಮ 2006-08 ರ ಅಡಿಯಲ್ಲಿ ಅರಣ್ಯ ಅತಿಕ್ರಮಗಳನ್ನು ಸಕ್ರಮಗೊಳಿಸಲು ಮಾತ್ರ ಅವಕಾಶವಿದ್ದು ಅರಣ್ಯ ಜಮೀನುಗಳನ್ನು ಬೇರೆ ಇನ್ನಾವುದೇ ಕಾಯ್ದೆ, ನಿಯಮಾವಳಿಗಳಿರುವ ಅವಕಾಶವಿರುವುದಿಲ್ಲ ಎಂದು ಸದಸ್ಯರ ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ