ಭಾಗವಹಿಸಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ಬೀದಿ ನಾಟಕ ಸಂಘದ ಒತ್ತಾಯ

 

ಬೆಂಗಳೂರು,ಜು.11- ಕಾರ್ಯಕ್ರಮಗಳಲ್ಲಿ ಎಲ್ಲಾ ಕಲಾ ತಂಡಗಳಿಗೂ ಭಾಗವಹಿಸಲು ಅವಕಾಶ ನೀಡಬೇಕೆಂದು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಮಹಾಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ಎಲ್ಲಾ ಇಲಾಖೆ ಕಾರ್ಯಕ್ರಮಗಳನ್ನು ವಾರ್ತಾ ಇಲಾಖೆಗೆ ವಹಿಸುವುದನ್ನು ಬಿಟ್ಟು ಆಯಾಯ ಇಲಾಖೆಗಳೇ ಕಾರ್ಯಕ್ರಮಗಳನ್ನು ನಿರ್ವಹಿಸಿ ಕಾರ್ಯಕ್ರಮದ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ ಎಲ್ಲ ತಂಡಗಳಿಗೂ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಬೇಕು. ಒಂದು ತಂಡಕ್ಕೆ ಪ್ರತಿದಿನ ಮೂರು ಕಾರ್ಯಕ್ರಮಗಳನ್ನಾದರೂ ನೀಡಬೇಕು. ಕಾರ್ಯಕ್ರಮ ನೀಡುವ ಸ್ಥಳಗಳಲ್ಲಿ ಕಲಾವಿದರಿಗೆ ಊಟ ಹಾಗೂ ವಸತಿ ಸೌಲಭ್ಯ ಒದಗಿಸಬೇಕು ಹಾಗೂ ಬೀದಿ ನಾಟಕಗಳ ಕಲಾವಿದರಿಗೆ ಭೀಮಾಸೌಲಭ್ಯ ಒದಗಿಸಬೇಕು, ಮಾಸಾಶನ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.
ಬೀದಿ ನಾಟಕ ಕಲಾವಿದರನ್ನುಯಾವುದೇ ಅಕಾಡೆಮಿಗಳು ಪರಿಗಣಿಸುವುದರಿಂದ ಬೀದಿ ನಾಟಕಗಳನ್ನು ಈಗಿರುವ ನಾಟಕ ಅಕಾಡೆಮಿ, ಜನಪರ ಅಕಾಡೆಮಿಗಳಿಗೆ ಸೇರಿಸಬೇಕು. ಇಲ್ಲವೇ ಪ್ರತ್ಯೇಕ ಬೀದಿ ನಾಟಕ ಅಕಾಡೆಮಿ ಸ್ಥಾಪಿಸಬೇಕು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷೆ ಲತಾ ಪಾಟೀಲ್, ಪ್ರಧಾನ ಕಾರ್ಯದರ್ಶಿ ಆಂಜನಿನಪ್ಪ , ಖಜಾಂಚಿ ವೈರಮುಡಿ ಸೇರಿದಂತೆ ಮತ್ತಿತರರು ಇದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ