ಬೆಂಗಳೂರು, ಜು.11-ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 34 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು, ಹಳದಿ ಕಣ್ಣಿನಿಂದ ನೋಡಬಾರದು ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಪ್ರಸಕ್ತ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದು ನಿಜ. ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲು ಐದು ವರ್ಷಗಳ ಕಾಲಾವಕಾಶವಿದೆ ಎಂದರು.
ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆಯನ್ನು ಪರಿಷ್ಕರಣೆ ಮಾಡಬೇಕು. ಪಡಿತರ ಚೀಟಿದಾರರಿಗೆ ಪ್ರತಿ ವ್ಯಕ್ತಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು ಮುಂದುವರೆಸಬೇಕು. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಕಾರ್ಯಕ್ರಮ ರೂಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಉತ್ತಮ ಆಡಳಿತ ನೀಡಲು ಹೆಚ್ಚು ಕಾರ್ಯಕ್ರಮಗಳನ್ನು ಘೋಷಿಸಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು. ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆಯಾಗಿರುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಮಹದಾಯಿ ಯೋಜನೆಯನ್ನೂ ಕೂಡ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.
ಮೇಯುವವರು ಬೇಡ:ತೆರಿಗೆ ಹಣ ಸೋರಿಕೆ ತಡೆಗೆ ಅಗರ್ಯ ಕ್ರಮಕೈಗೊಳ್ಳಬೇಕು ಮೂಲಸೌಲಭ್ಯ ಒದಗಿಸಲು ಸೂಕ್ತ ಕ್ರಮಖೈಗೊಳ್ಳಬೇಕು. ನಮಗೆ ಮೇಯುವ ಹೋರಿ ಬೇಕಿಲ್ಲ, ದುಡಿಯುವ ಎತ್ತು ಬೇಕು. ಹೋರಿ ಸಂಸ್ಕøತಿ ಕಾಯಕ ಸಂಸ್ಕøತಿಯಲ್ಲ. ಮೇಯುವವರನ್ನು ಹೊರಗಟ್ಟದಿದ್ದರೆ ಸೋರಿಕೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಾತ್ಮಗಾಂಧೀಜಿ ಅವರ ಅಭಿಪ್ರಾಯದಂತೆ ಧೀಮಂತರ ಬದಲಾಗಿ ಬಡವರ ದೃಷ್ಟಿಕೋನದಿಂದ ಅಭಿವೃದ್ಧಿ ಕಾರ್ಯಗಳನ್ನು ನೋಡಬೇಕಿದೆ. ನಮ್ಮ ದೇಶ ಬಡವರಿಂದ ತುಂಬಿದ ಶ್ರೀಮಂತ ರಾಷ್ಟ್ರ. ಸರ್ಕಾರದ ಸೌಲಭ್ಯಗಳು ಜನರಿಗೆ ಉಚಿತವಾಗಿ ದೊರೆಯಬೇಕು. ಕೊಂಡುಕೊಂಡೆ ಎಂಬ ಭಾವನೆ ಬರದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಪ್ರಬಲವಾದ ವಿರೋಧ ಪಕ್ಷವಿದ್ದು, ಸರ್ಕಾರದ ನ್ಯೂನ್ಯತೆಗಳನ್ನು ಸರಿಪಡಿಸಲು ಆಡಳಿತ ಹಳಿ ತಪ್ಪದಂತೆ ಎಚ್ಚರಿಸಿ ಮಾರ್ಗದರ್ಶನ ನೀಡಲು ಮೈಕ್ರೋಸ್ಕೋಪ್ ರೀತಿಯಲ್ಲಿ ಕಣ್ಗಾವಲು ಇಡುವುದು ತಪ್ಪಲ್ಲ ಎಂದರು.
ಇಂಗ್ಲೀಷ್ ಕಲಿಕೆಗೆ ವಿರೋಧ ಬೇಡ:
ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲೀಷ್ ಬೋಧನೆ ಮಾಡುವ ಸರ್ಕಾರದ ತೀರ್ಮಾನಕ್ಕೆ ವಿರೋಧ ಮಾಡುವುದು ಬೇಡ. ಆಂಗ್ಲ ಭಾಷಾ ಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ. ಹೀಗಾಗಿ ಸಾಹಿತಿಗಳು ವಿರೋಧಿಸುವುದು ಬೇಡ ಎಂದು ರಾಮಸ್ವಾಮಿ ಮನವಿ ಮಾಡಿದರು.
ಹಳ್ಳಿಗಾಡಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಅಗತ್ಯವಿದೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಲಾಗಿದೆ. ಒಳ್ಳೆಯ ಕಟ್ಟಡ ಕಟ್ಟಿದರೂ ವೈದ್ಯರಿಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ