ಜಿಡಿಪಿಯಲ್ಲಿ ಫ್ರಾನ್ಸ್ ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿದ ಭಾರತ !

ಪ್ಯಾರಿಸ್: ದೇಶದ ಆರ್ಥಿಕತೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿರುವ ಸಮಯದಲ್ಲೇ ಭಾರತ ಪ್ರಗತಿ ಸಾಧಿಸಿದೆ. 2017ರ ಜಿಡಿಪಿಯಲ್ಲಿ ಭಾರತ ಫ್ರಾನ್ಸ್ ಅನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಜಿಗಿದಿದೆ.
ವಿಶ್ವ ಬ್ಯಾಂಕ್ನ ಇತ್ತೀಚಿನ ದತ್ತಾಂಶಗಳ ಪ್ರಕಾರ, ಕಳೆದ ವರ್ಷದ ಅಂತ್ಯಕ್ಕೆ ಭಾರತ ಜಿಡಿಪಿ ಒಟ್ಟಾರೆ 2.597 ಟ್ರಿಲಿಯನ್ ಡಾಲರ್ ಗೆ ತಲುಪಿದೆ. ಅಂದರೆ 165 ಲಕ್ಷ ಕೋಟಿಗೂ ಹೆಚ್ಚು… ಆದರೆ, ಫ್ರಾನ್ಸ್ನ ಜಿಡಿಪಿ ಮತ್ತ 2.582 ಟ್ರಿಲಿಯನ್ ಡಾಲರ್ ಆಗಿತ್ತು. ಈ ಮೂಲಕ ಹಲವು ತ್ರೈಮಾಸಿಕಗಳಿಂದ ಸತತವಾಗಿ ಕುಸಿತ ಕಂಡಿದ್ದ ಭಾರತದ ಆರ್ಥಿಕತೆ, 2017ರ ಜುಲೈನಿಂದ ಮತ್ತೆ ಉತ್ತಮ ಹಳಿಗೆ ಬಂದಿದೆ.
ಸುಮಾರು 134 ಕೋಟಿ ಜನ ಸಂಖ್ಯೆಯನ್ನು ಹೊಂದಿರುವ ಭಾರತ, ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಫ್ರಾನ್ಸ್ನ ಜನ ಸಂಖ್ಯೆ ಇರುವುದು ಕೇವಲ 6.7 ಕೋಟಿ ಮಾತ್ರ. ಭಾರತದ ಒಬ್ಬ ವ್ಯಕ್ತಿಯ ತಲಾವಾರು ಜಿಡಿಪಿಗೆ ಲೆಕ್ಕ ಹಾಕಿದರೆ, ಫ್ರಾನ್ಸ್ ನಮ್ಮ ದೇಶದ 20 ಪಟ್ಟು ಹೆಚ್ಚಿನ ತಲಾದಾಯ ಹೊಂದಿದೆ.
ನೋಟು ರದ್ಧತಿ ಮತ್ತು ಜಿಎಸ್ಟಿ ಜಾರಿಯಿಂದ ಭಾರತ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಫ್ರಾನ್ಸ್ ಹಿಂದಿಕ್ಕಿ ಭಾರತ ಆರನೇ ಸ್ಥಾನವನ್ನು ಅಲಂಕರಿಸಿದೆ.
ಇನ್ನು, ಆರ್ಥಿಕತೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇದಾದ ನಂತರದಲ್ಲಿ ಕ್ರಮವಾಗಿ ಚೀನಾ, ಜಪಾನ್ ಮತ್ತು ಜರ್ಮನಿ ರಾಷ್ಟ್ರಗಳಿವೆ. ಇವುಗಳ ಬಳಿಕ 2.622 ಟ್ರಿಲಿಯನ್ ಡಾಲರ್ ಮೊತ್ತದೊಂದಿಗೆ ಬ್ರಿಟನ್ ಐದನೇ ಸ್ಥಾನದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ