
ಮುಜಾಫರಾಬಾದ್ (ಪಿಟಿಐ), ಜು.10- ದೆಹಲಿ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಅವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಮ್ಲಿ ಜಿಲ್ಲೆಯ ಮಸೂರಾ ಗ್ರಾಮದಲ್ಲಿ ಪೆÇಲೀಸರ ತಂಡ ಬಂಧಿಸಿದೆ.
ಹಲವಾರು ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಖೇಮ್‍ಸಿಂಗ್ ಬಂಧಿತ ಎಂದು ಎಸ್ಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ. ಕಳೆದ ರಾತ್ರಿ ನಗರ ಪ್ರವೇಶಿಸುವ ವಾಹನಗಳ ತಪಾಸಣೆಗಾಗಿ ನಾಕಾಬಂದಿ ಮಾಡಿ ಪೆÇಲೀಸರು ವಾಹನಗಳನ್ನು ತಡೆದು ಪರಿಶೀಲಿಸುವಾಗ ಈತ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ. ಕಳೆದ ಮೇನಲ್ಲಿ ದೆಹಲಿಯಲ್ಲಿ ಎಸ್‍ಐ ಒಬ್ಬರನ್ನು ತಡೆದು ದರೋಡೆ ಮಾಡಿ ನಂತರ ಅವರನ್ನು ಇರಿದು ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.