
ಮುಳಬಾಗಿಲು, ಜು.10- ನಕಲಿ ಗುಟ್ಕಾ ತಯಾರಿಕಾ ಅಡ್ಡೆ ಮೇಲೆ ಪೆÇಲೀಸರು ದಾಳಿ ಮಾಡಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೈದರ್ ನಗರದ 3 ಮನೆಗಳಲ್ಲಿ ನಕಲಿ ಗುಟ್ಕಾ ತಯಾರು ಮಾಡುತ್ತಿರುವುದರ ಬಗ್ಗೆ ನಿಖರ ಮಾಹಿತಿ ಮೇರೆಗೆ ನಗರ ಠಾಣೆಯ ಪಿಎಸ್‍ಐ ಬೈರಾ ನೇತೃತ್ವದ ತಂಡ ಇಂದು ಬೆಳಗ್ಗೆ ದಾಳಿ ಮಾಡಿ 50 ಲಕ್ಷ ಮೌಲ್ಯದ ಮಿಷನರಿ ತಂಬಾಕು ಹಾಗೂ ಅಡಿಕೆಗಳನ್ನು ಸೀಜ್ ಮಾಡಿದ್ದಾರೆ.
ನಕಲಿ ಗುಟ್ಕಾ ಪ್ಯಾಕ್‍ಗಳಿಗೆ ಹಾಯ್ ಖಲೇಜಾ ಮತ್ತು ಜಿ ಎಂಬ ಬ್ರ್ಯಾಂಡ್ ಹೆಸರಿಡಲಾಗಿದೆ.
ಈ ಸಂಬಂಧ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.