
ಟೋಕಿಯೋ, ಜು.10- ಜಪಾನ್ನಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಬಲಿಯಾಗುತ್ತಿರುವವರ ಸಂಖ್ಯೆ 150ಕ್ಕೆ ಏರಿದೆ. ಪ್ರವಾಹದ ಜೊತೆಗೆ ಭೂ ಕುಸಿತವೂ ಹೆಚ್ಚುತ್ತಿದ್ದು , ಅಪಾರ ಆಸ್ತಿ ಹಾನಿಯಾಗಿದೆ. ಪ್ರವಾಹದಲ್ಲಿ ಹಲವರು ಕೊಚ್ಚಿಕೊಂಡು ಹೋಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ತಂದಿದೆ ಎಂದು ರಕ್ಷಣಾ ಕಾರ್ಯ ಪಡೆಯ ಮುಖ್ಯಸ್ಥ ಯೋಶಿ ಹೈದ್ಸುಗ ತಿಳಿಸಿದ್ದಾರೆ.