ನಂಜನಗೂಡು, ಜು.9- ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿಯು ತುಂಬಿ ಹರಿಯುತ್ತಿದ್ದು, ಕಳೆದ ಒಂದು ವಾರದಿಂದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. 16 ಕಾಲುಗಳ ಮಂಟಪವೂ ಕೂಡ ಸಂಪೂರ್ಣವಾಗಿ ನೀರಿನಿಂದ ಜಲಾವೃತವಾಗಿದೆ.
ದೊಡ್ಡ ಸೇತುವೆಯ ಹಳೆ ರೈಲ್ವೆ ಬಿಡ್ಜ್ ಕೂಡ ನೀರಿನಿಂದ ತುಂಬಿ ಹರಿಯುತ್ತಿದೆ ಮತ್ತು ಪರಶುರಾಮ ಕ್ಷೇತ್ರದ ದೇವಸ್ಥಾನದ ಕಜ್ಜಿ ಕೊಳ ಮತ್ತು ಗದ್ದೆಯಲ್ಲಿ ನದಿ ನೀರು ಆವರಿಸಿತ್ತು. ಕಬಿನಿ ಜಲಾಶಯದಲ್ಲಿ 46.856 ಕ್ಯುಸೆಕ್ಸ್ ಹರಿ ಬಿಟ್ಟಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಕಾರಣ ಕಪಿಲಾ ನದಿಯು ತುಂಬಿ ಹರಿಯುತ್ತಿದೆ. ನದಿಯ ಅಂಚಿನಲ್ಲಿರುವ ಗ್ರಾಮಗಳಿಗೆ ತಹಸೀಲ್ದಾರ್ ದಯಾನಂದ್ ಮುಂಜಾಗ್ರತೆಯಾಗಿ ಆರ್ಐಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಮೂಲಕ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂದರ್ಭವಾಗಿ ಪೆÇಲೀಸ್ ಇಲಾಖೆ ಮುಂಜಾಗ್ರತೆಯಲ್ಲಿ ಸ್ನಾನ ಘಟ್ಟದ ಸುತ್ತಲೂ ಹಗ್ಗಗಳಿಂದ ಕೋಟೆ ನಿರ್ಮಿಸಿ ಮತ್ತು ಪೆÇಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.