ದಾಖಲೆ ಶತಕ, ಒಂದೇ ಪಂದ್ಯದಲ್ಲಿ 2 ದಾಖಲೆ ಬರೆದ ರೋ’ಹಿಟ್’ ಶರ್ಮಾ!

ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧ ಬ್ರಿಸ್ಟೋಲ್ ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸಮನ್ ರೋ’ಹಿಟ್’ ಶರ್ಮಾ ದಾಖಲೆಯ ಶತಕ ಸಿಡಿಸಿದ್ದು, ಟಿ20 ವೃತ್ತಿ ಜೀವನದ 3ನೇ ಶತಕ ಸಿಡಿಸಿದರು.
ಬ್ರಿಸ್ಟೋಲ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮಾ ಒಂದೇ ಪಂದ್ಯದಲ್ಲಿ ಎರಡು ದಾಖಲೆಗಳ ನಿರ್ಮಾಣ ಮಾಡಿದರು. ಕೇವಲ 56 ಎಸೆತಗಳಲ್ಲಿ 100 ರನ್ ಸಿಡಿಸಿದ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ 3ನೇ ಶತಕ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.
ಅಂತೆಯೇ ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ 2000 ಸಾವಿರ ರನ್ ಪೂರೈಸಿದ ಕೀರ್ತಿಗೂ ಭಾಜನರಾದರು. ಆ ಮೂಲಕ 2000 ರನ್ ಪೂರೈಸಿದ ಭಾರತದ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದರು. ರೋಹಿತ್ ಶರ್ಮಾ ಒಟ್ಟು 84 ಪಂದ್ಯಗಳಲ್ಲಿ 76 ಇನ್ನಿಂಗ್ಶ್ ಗಳ ಮೂಲಕ 2086 ರನ್ ಗಳಿಸಿದ್ದಾರೆ.
ಸರಣಿ ಶ್ರೇಷ್ಠ-ಪಂದ್ಯ ಪುರುಷೋತ್ತಮ ಪ್ರಶಸ್ತಿ
ಅಂತಿಮ ಪಂದ್ಯದಲ್ಲಿ ಶತಕದ ಮೂಲಕ ತಂಡಕ್ಕೆ ಗೆಲುವು ತಂದಿತ್ತ ರೋಹಿತ್ ಶರ್ಮಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಲ್ಲದೇ ಸರಣಿಯಲ್ಲಿ ಒಟ್ಟು 137ರನ್ ಸಿಡಿಸಿದ ಕಾರಣ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ