
ಲಂಡನ್: ಕ್ರಿಕೆಟ್ ನಲ್ಲಿ ದಾಖಲೆ ಮಾಡಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ. ಅದೇ ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆಗಳನ್ನು ಬರೆದಾಗ ಅಂತಹ ಆಟಗಾರ ಖುಷಿಗೆ ಪಾರವೇ ಇರುವುದಿಲ್ಲ.
ಕ್ರಿಕೆಟ್ ನಲ್ಲಿ ಶತಕ ಬಾರಿಸುವುದು, ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಬ್ಯಾಟ್ಸ್ ಮನ್ ಹಾಗೂ ಬೌಲರ್ ನ ಆಸೆಯಾಗಿರುತ್ತದೆ. ಒಂದೇ ಪಂದ್ಯದಲ್ಲಿ ಒಬ್ಬನೇ ಆಟಗಾರನೊಬ್ಬ ಶತಕ, ಹ್ಯಾಟ್ರಿಕ್ ವಿಕೆಟ್ ಪಡೆದು ಅಪರೂಪದ ದಾಖಲೆಯನ್ನು ಮಾಡಿದ್ದಾರೆ.
ಇಂಗ್ಲೆಂಡ್ ಕೌಂಟಿ ತಂಡವಾದ ಕೆಂಟ್ ನ ಜೋಸೆಫ್ ಡೆನ್ಲೆ ಈ ಸಾಧನೆ ಮಾಡಿದ ಆಟಗಾರ. ಸರ್ರೆ ವಿರುದ್ಧ ಟಿ20 ಪಂದ್ಯದಲ್ಲಿ ಮೊದಲು 63 ಎಸೆತಗಳಲ್ಲಿ 102 ರನ್ ಗಳಿಸಿದ ಡೆನ್ಲಿ, ಬಳಿಕ 13ನೇ ಓವರ್ ನ ಕೊನೆಯ 3 ಎಸೆತಗಳಲ್ಲಿ 3 ವಿಕೆಟ್ ಕಬಳಿಸಿ ಹ್ಯಾಟ್ರಿಕ್ ವಿಕೆಟ್ ಸಾಧನೆಗೈದರು.
ಟಿ20 ಇಲ್ಲವೇ ಏಕದಿನ ಕ್ರಿಕೆಟ್ ನಲ್ಲಿ ಆಟಗಾರನೊಬ್ಬ ಶತಕ ಬಾರಿಸಿ, ಹ್ಯಾಟ್ರಿಕ್ ಪಡೆದಿದ್ದು ಇದೇ ಮೊದಲು ಮತ್ತೊಂದು ವಿಶೇಷ ಅಂದರೆ ಡೆನ್ಲೆ ತಂಡದ ಪರ ಬ್ಯಾಟಿಂಗ್, ಬೌಲಿಂಗ್ ಆರಂಭಿಸಿದ್ದರು.