ಬೆಂಗಳೂರು,ಜು.9- ರೈತರ ಸಾಲಮನ್ನಾ ಮಾಡಿರುವಂತೆ ಕರ್ನಾಟಕ ರಾಜ್ಯ ನೇಕಾರರ ಸಾಲಮನ್ನಾ ಮಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ನೇಕಾರರ ಮಹಾಸಭಾ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಬಿ.ಎಸ್.ಸೋಮಶೇಖರ್, ರೈತರು ಎಷ್ಟು ಮುಖ್ಯವೋ ನೇಕಾರರು ಅಷ್ಟೇ ಮುಖ್ಯವಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ರೈತ ಮತ್ತು ನೇಕಾರರ ಎರಡು ಕಣ್ಣುಗಳು ಇದ್ದಂತೆ ಹೇಳಿ. ಬಜೆಟ್‍ನಲ್ಲಿ ನೇಕಾರರ ಮೇಲಿರುವ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಮಂಡಿಸದೆ ನಮ್ಮ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ.
ಒಟ್ಟಾರೆ ನೇಕಾರರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಎರಡು ಕೋಟಿ ರೂ.ಗಳಿಗಿಂತಲೂ ಸಾಲ ಕಡಿಮೆ ಇದೆ. ಆದ್ದರಿಂದ ನೇಕಾರರ ಸಾಲವನ್ನು ಮನ್ನಾ ಮಾಡಿ ತಮ್ಮ ಸಮುದಾಯವನ್ನು ಉತ್ತೇಜಿಸಬೇಕೆಂದು ಮನವಿ ಮಾಡಿದರು.
ಒಂದು ವೇಳೆ ಒಂದು ವಾರದೊಳಗೆ ಸಾಲಮನ್ನಾ ಮಾಡದಿದ್ದರೆ ಬೃಹತ್‍ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.