
ಮಂಗಳೂರು, ಜು.9- ಲಾರಿ ಹಾಗೂ ಜೀಪಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿರುವ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ನಡೆದಿದೆ. ಮಂಗಳೂರಿನ ಕೆ.ಸಿ.ರೋಡ್ನ ನಿವಾಸಿಗಳಾದ ಬಿ.ಫಾತಿಮ್ (65), ಅಸ್ಮಾ (30), ನಸೀಮಾ (38), ಮಸ್ತಾಕ್ (41), ಇಫ್ತಿಯಾಜ್ (35) ಮೃತಪಟ್ಟ ದುರ್ದೈವಿಗಳು. ಪಾಲಕ್ಕಾಡಿನಲ್ಲಿ ಸಂಬಂಧಿಕರ ಗೃಹ ಪ್ರವೇಶ ಮುಗಿಸಿಕೊಂಡು ಮಂಗಳೂರಿಗೆ ವಾಪಸಾಗುತ್ತಿದ್ದಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ದುರಂತದಲ್ಲಿ ಜೀಪಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಹರಸಾಹಸ ಪಟ್ಟು ಜೀಪಿನೊಳಗೆ ಸಿಲುಕಿದ್ದ ಮೃತ ಶವಗಳನ್ನು ಹೊರ ತೆಗೆದಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು , ಅವರನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.