ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ

 

ಬೆಂಗಳೂರು,ಜು.9- ರಾಜ್ಯದ ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳು ನೇಪಾಳದ ಸಿಮಿಕೋಟ್‍ನಲ್ಲಿ ಸುರಕ್ಷಿತವಾಗಿದ್ದಾರೆ. ಎಲ್ಲಾ ಪ್ರವಾಸಿಗರಿಗೂ ಊಟ, ಕುಡಿಯುವ ನೀರು, ತಾತ್ಕಾಲಿಕ ವಸತಿ, ವೈದ್ಯಕೀಯ ಸೇವೆ ಒದಗಿಸಲಾಗಿದೆ ಎಂದು ಕಂದಾಯ ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಪರವಾಗಿ ಕನ್ನಡ ಮತ್ತು ಸಂಸ್ಕøತಿ ಸಚಿವೆ ಜಯಮಾಲ ವಿಧಾನಪರಿಷತ್‍ಗೆ ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಕೆ.ಟಿ.ಶ್ರೀಕಂಠೇಗೌಡ ಅವರು ಪ್ರಸ್ತಾಪಿಸಿದ ಸೂಚನೆಗೆ ಉತ್ತರ ನೀಡಿದ ಅವರು, ಕೈಲಾಸ ಮಾನಸ ಸರೋವರ ಯಾತ್ರಾರ್ಥಿಯಾಗಿರುವ ಸುಮಾರು 200 ಮಂದಿ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರಿಗೆ ದೂರವಾಣಿ ಸಂಪರ್ಕ ಇನ್ನಿತರ ಸೇವೆಗಳನ್ನು ತುರ್ತಾಗಿ ಪುನನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಮುಖ್ಯ ಕಾರ್ಯದರ್ಶಿಗಳು ಕಂದಾಯ ಸಚಿವರು ನಿರಂತರವಾಗಿ ನಿಗಾವಹಿಸಿದ್ದಾರೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿಯು ಆಪತ್ತಿನಲ್ಲಿ ಸಿಲುಕಿರುವ ಎಲ್ಲ ಪ್ರಯಾಣಿಕರನ್ನು ಬೇರೊಂದು ದಾರಿಯಲ್ಲಿ ಕರೆತರಲು ನೇಪಾಳ ಸರ್ಕಾರದ ಸೇನಾ ಹೆಲಿಕ್ಯಾಪ್ಟರ್ ಬಳಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ತುರ್ತು ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಅತ್ಯುತ್ತಮ ದೂರವಾಣಿ ಸಂಪರ್ಕ ಪ್ರಯಾಣಿಕರ ಜತೆಯಲ್ಲಿ ಸರಳವಾಗಿ ಸಂಭಾಷಣೆ ಮಾಡಲು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷಾ ಪರಿಣಿತಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಯೋಗಾನಂದ (ಹಾಟ್‍ಲೈನ್) ಕನ್ನಡ ಭಾಷೆಯಲ್ಲಿ 977-9823672371 ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ