
ಮುಂಬೈ, ಜು.9- ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸೈರಸ್ ಮಿಸ್ತ್ರಿ ಅವರ ಅರ್ಜಿಯನ್ನು ರಾಷ್ಟ್ರೀಯ ವ್ಯವಹಾರಿಕ ಕಾನೂನು ನ್ಯಾಯಾಧೀಕರಣ ವಜಾಗೊಳಿಸಿದೆ. ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ಮಿಸ್ತ್ರಿ ಅವರ ಮೇಲಿನ ವಿಶ್ವಾಸ ಕಡಿಮೆಯಾದ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಟಾಟಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರ ತೀರ್ಮಾನದ ವಿರುದ್ಧ ಮಿಸ್ತ್ರಿ ಅವರು ರಾಷ್ಟ್ರೀಯ ವ್ಯವಹಾರಿಕ ಕಾನೂನು ನ್ಯಾಯಾಧೀಕರಣದ ಮೊರೆ ಹೋಗಿದ್ದರು. ಮಿಸ್ತ್ರಿ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬಿ.ಎಸ್.ವಿ.ಪ್ರಕಾಶ್ಕುಮಾರ್ ಮತ್ತು ವಿ.ನಲ್ಲಸೇನಾಪತಿ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ.