
ಬಳ್ಳಾರಿ, ಜು.9- ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು, ಇಂದು ಬೆಳಗ್ಗೆ ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳವು ವಿಜಯನಗರ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಸ್ಪಿಟಲ್‍ನ ಎಎಒ ದುರ್ಗಪ್ಪ ಕಚೇರಿ ಮೇಲೆ ದಾಳಿ ನಡೆಸಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ-ಪಾಸ್ತಿ ಹೊಂದಿರುವ ಬಗ್ಗೆ ಎಸಿಬಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿ ದುರ್ಗಪ್ಪ ಅವರ ಬ್ರಹ್ಮಯ್ಯ ಕಾಲೋನಿ, ವಿಶ್ವೇಶ್ವರನಗರದ ವಾಸದ ಮನೆ, ಎಂವಿ ನಗರ, ಕಾಪಗಲ್ ರಸ್ತೆ, ಬಳ್ಳಾರಿಯಲ್ಲಿನ ಸಹೋದರಿ ಮನೆ ಹಾಗೂ ಇವರ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.