
ಬೆಂಗಳೂರು, ಜು.8- ಶಿಷ್ಟಾಚಾರವನ್ನು ಬದಿಗೊತ್ತಿ ಮೊದಲು ಆ್ಯಂಬುಲೆನ್ಸ್ ಗಳಿಗೆ ಅವಕಾಶ ಮಾಡಿಕೊಡಿ. ಗೃಹ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರು ಪೆÇಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾನು ಸಂಚರಿಸುವ ಮಾರ್ಗಗಳಲ್ಲಿ ಶಿಷ್ಟಾಚಾರದಂತೆ ಟ್ರಾಫಿಕ್ ಫ್ರೀ ಮಾಡುವ ಸಲುವಾಗಿ ಕೆಲವು ಬಾರಿ ಆ್ಯಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದನ್ನು ಗಮನಿಸಿರುತ್ತೇನೆ. ನನಗೆ ಮತ್ತು ಇನ್ನಿತರೆ ವಿಐಪಿಗಳಿಗೆ ನೀಡಿರುವ ಶಿಷ್ಟಾಚಾರವನ್ನು ಬದಿಗೊತ್ತಿ ಸಂಚಾರದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ವಾಹನಗಳು ಯಾವುದೇ ರೀತಿಯ ತೊಂದರೆಯಾಗದಂತೆ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಸಂಚಾರಿ ದಟ್ಟಣೆ ಇರುವುದರಿಂದ ಪ್ರತಿಯೊಂದು ಕ್ಷಣವೂ ಮಹತ್ವದ್ದಾಗಿರುತ್ತದೆ. ಆ್ಯಂಬುಲೆನ್ಸ್‍ನಲ್ಲಿ ರೋಗಿಗಳನ್ನು ಕರೆ ತರುತ್ತಿರುತ್ತಾರೆ. ಅವರಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಹಾಗಾಗಿ ಮುಕ್ತ ಅವಕಾಶ ನೀಡಬೇಕಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.