
ಕಾರ್ಡಿಫ್: ಮೊದಲ ಪಂದ್ಯದಲ್ಲಿ ಭಾರತ ವಿರುದ್ದ ಹೀನಾಯವಾಗಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಕಾರ್ಡಿಫ್‍ನಲ್ಲಿ ನಡೆಯಲಿರುವ ಎರಡನೆ ಟಿ20 ಪಂದ್ಯಕ್ಕೆ ಕಠಿಣ ಅಭ್ಯಾಸ ಮಾಡುತ್ತಿದೆ.
ಪ್ರಮುಖವಾಗಿ ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಭಯ ಕಾಡುತ್ತಿದ್ದು ಇದಕ್ಕಾಗಿ ಆಂಗ್ಲರು ಬೌಲಿಂಗ್ ಮಷೀನ್ ಮೊರೆ ಹೋಗಿದ್ದಾರೆ. ಕುಲ್‍ದೀಪ್ ಎದುರಿಸಲು ಬೌಲಿಂಗ್ ಮಷೀನ್‍ನಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಕುಲ್‍ದೀಪ್ ಯಾದವ್ ಕೇವಲ 24 ರನ್ ನೀಡಿ ಪ್ರಮುಖ 5 ವಿಕೆಟ್‍ಗಳನ್ನ ಪಡೆದು ಮಿಂಚಿದ್ದರು.ಎರಡನೇ ಟಿ20 ಪಂದ್ಯ ಶುಕ್ರವಾರ ಕಾರ್ಡಿಫ್‍ನಲ್ಲಿ ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ನಡೆಯಲಿದೆ. ಕಾರ್ಡಿಫ್‍ಗೆ ಬಂದಿಳಿದ ಟೀಂ ಇಂಡಿಯಾ
ಕಾರ್ಡಿಫ್: ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಆಂಗ್ಲರ ವಿರುದ್ಧ ಅಮೋಘ ಗೆಲುವು ದಾಖಲಿಸಿದ ಟೀಂ ಇಂಡಿಯಾ ಎರಡನೇ ಚುಟುಕು ಪಂದ್ಯ ಅಡಲು ಕಾರ್ಡೀಫ್‍ಗೆ ಬಂದಿಳಿದಿದೆ.
ಈ ಬಗ್ಗೆ ತಂಡದ ಆಲ್‍ರೌಂಡರ್ ಸುರೇಶ್ ರೈನಾ ಸೇರಿದಂತೆ ಹಲವರು ಅಟಗಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆಂಗ್ಲರ ಸರಣಿಗೂ ಮುನ್ನ ಮೋಜು ಮಸ್ತಿ ಮಾಡಿದ್ದ ಟೀಂ ಇಂಡಿಯಾ ಆಟಗಾರರು ಎರಡನೇ ಪಂದ್ಯಕ್ಕೂ ಮುನ್ನ ಕೆಲವು ಆಟಗರರು ಶಾಪಿಂಗ್ ಮಾಡಿ ಒತ್ತಡವನ್ನ ಕಡಿಮೆ ಮಾಡಿಕೊಂಡ್ರು.