ಹಾಸನ,ಜು.8-ಜಿಲ್ಲೆಯಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇಂದು ಕೂಡ ಆನೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕವನ್ನುಂಟು ಮಾಡಿವೆ. ಸಕಲೇಶಪುರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಮರಿಯಾನೆಯೊಂದಿಗೆ 15ಕ್ಕೂ ಹೆಚ್ಚು ಕಾಡಾನೆಗಳು ಲಗ್ಗೆ ಇಟ್ಟಿದ್ದು , ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿವೆ. ರೈತರು ಬೆಳೆದ ಕಾಫಿ, ಭತ್ತ , ಶುಂಠಿ ಬೆಳೆಯನ್ನು ಹಾನಿ ಮಾಡಿದ್ದು , ರೈತರಲ್ಲಿ ಚಿಂತೆಗೀಡಾಗುವಂತೆ ಮಾಡಿದೆ. ಜಿಲ್ಲೆಗೆ ಆಗಾಗ ಕಾಡಾನೆಗಳು ಬಂದು ಬೆಳೆ ನಾಶ ಮಾಡಿ ಹೋಗುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೂ ಕೂಡ ಮಾಹಿತಿ ನೀಡಲಾಗಿದೆ. ಆನೆ ಕಾರಿಡಾರ್ ಮಾಡುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆನೆ ಓಡಿಸಲು ಹರಸಾಹಸಪಟ್ಟರು.