
ಬೆಂಗಳೂರು, ಜು.8- ತಿರುಪತಿಯಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬನನ್ನು ಆಟೋ ಚಾಲಕ ಹಾಗೂ ಮಹಿಳೆಯರಿಬ್ಬರು ಬೆದರಿಸಿ ಆತನ ಬಳಿ ಇದ್ದ 40 ಸಾವಿರ ರೂ. ದರೋಡೆ ಮಾಡಿರುವ ಘಟನೆ ಕಾಟನ್‍ಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಿರುಪತಿಯ ಚಿಟ್ಟಿಬಾಬು ದರೋಡೆಗೊಳಗಾದ ವ್ಯಕ್ತಿ.
ಈತ ಜು.3ರಂದು ಮುಂಜಾನೆ ತಿರುಪತಿಯಿಂದ ಬಸ್‍ನಲ್ಲಿ ಬಂದು ಮೆಜೆಸ್ಟಿಕ್‍ನಲ್ಲಿ ಇಳಿದು ಆಟೋ ಹತ್ತಿದ್ದಾರೆ. ಇದೇ ವೇಳೆ ಇಬ್ಬರು ಮಹಿಳೆಯರು ಇದೇ ಆಟೋ ಹತ್ತಿದ್ದಾರೆ.
ಸ್ವಲ್ಪ ದೂರ ಹೋದ ನಂತರ ಆಟೋ ಚಾಲಕ ಹಾಗೂ ಮಹಿಳೆಯರು ಚಿಟ್ಟಿಬಾಬುವನ್ನು ಬೆದರಿಸಿ ಅವರ ಬಳಿ ಇದ್ದ 40 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಕಾಟನ್‍ಪೇಟೆ ಠಾಣೆಯಲ್ಲಿ ಚಿಟ್ಟಿಬಾಬು ದೂರು ದಾಖಲಿಸಿದ್ದಾರೆ.