ದಾವಣಗೆರೆ,ಜು.8-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಎಸ್ಸಿ-ಎಸ್ಟಿ ಜನಾಂಗದವರ ಕುಂದುಕೊರತೆಯ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟಗಳ ದೂರುಗಳೇ ಮಾರ್ಧನಿಸಿದವು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮುಖಂಡರು ಈ ಮೂರು ಸಮಸ್ಯೆಗಳಿಗೆ ಅಂಕುಶ ಹಾಕುವಂತೆ ಎಸ್ಪಿ ಅವರಲ್ಲಿ ಮನವಿ ಮಾಡಿಕೊಂಡರು.
ಎಸ್ಸಿ-ಎಸ್ಟಿ ಜನಾಂಗದವರು ವಾಸಿಸುವ ಕಡೆ ಮಟ್ಕಾ ಹಾಗೂ ಇಸ್ಪೀಟ್ ಆಡುವವರ ಹೆಚ್ಚಾಗಿದ್ದು , ಇಂಥ ಕಡೆ ಹೆಚ್ಚಿನ ಗಮನವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಚೇತನ್ ಭರವಸೆ ನೀಡಿದರು.
ಆರಂಭದಲ್ಲಿ ಹೊನ್ನಾಳಿ ತಾಲ್ಲೂಕಿನ ದಲಿತ ಮುಖಂಡ ಪ್ರಭಾಕರ್ ಮಾತನಾಡಿ, ಹಳ್ಳಿಗಳಲ್ಲಿ ದಲಿತರು ವ್ಯವಸಾಯ ಮಾಡುವಲ್ಲಿಯೂ ಇಂದಿಗೂ ದೌರ್ಜನ್ಯ ನಡೆಯುತ್ತಿದೆ. ದಲಿತರಿಗಾಗಿ ಮಂಜೂರಾದ ಅನುದಾನವನ್ನು ಬೇರೆ ಕಾರಣಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ದಲಿತ ಮುಖಂಡ ಮಂಜುನಾಥ್ ಮಾತನಾಡಿ, ಹೊನ್ನಾಳಿ ಪಟ್ಟಣದಲ್ಲಿ ಮೂರು ವೃತ್ತಗಳಿವೆ. ಸಿಗ್ನಲ್ನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಬಾಡದ ಬಿ.ಕೆ.ಬಸವರಾಜ್ ಮಾತನಾಡಿ, ಎಸ್ಸಿ ಎಸ್ಟಿ ಜನಾಂಗದವರು ಮರಣ ಹೊಂದಿದರೆ ಮಣ್ಣು ಮಾಡಲು ಜಾಗವೇ ಇಲ್ಲ. ಈ ಬಗ್ಗೆ ಎರಡು ವರ್ಷದಿಂದ ಮನವಿ ಮಾಡುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಎಲ್ಲ ಗ್ರಾಮಗಳಲ್ಲಿ ರುದ್ರಭೂಮಿ ಇರಬೇಕು. ಅದರಲ್ಲೂ ಎಸ್ಸಿ-ಎಸ್ಟಿ ಅವರಿಗೆ ಸ್ಮಶಾನ ಇಲ್ಲದೆ ಜಾಗವನ್ನು ಖರೀದಿ ಮಾಡಬೇಕಾಗಿದೆ ಎಂದಾಗ, ಎಸ್ಪಿ ಇದಕ್ಕೆ ಅರ್ಜಿ ಕೊಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪಣಿಯಪುರ ಲಿಂಗಾರಾಜು ಮಾತನಾಡಿ, ಹರಪ್ಪನಹಳ್ಳಿ ತಾಲ್ಲೂಕಿನ ಉಚ್ಚಂಗಿ ದುರ್ಗದ ವೃತ್ತದಲ್ಲಿ ಅನೇಕ ಅಪಘಾತಗಳು ನಡೆಯುತ್ತಿವೆ. ಇಲ್ಲಿ ಸೂಚನ ಫಲಕಗಳನ್ನು ಅಳವಡಿಸಬೇಕು ಹಾಗೂ ತಾತ್ಕಾಲಿಕ ಪೆÇಲೀಸ್ ಠಾಣೆ ತೆರೆಯುವಂತೆ ಮನವಿ ಮಾಡಿದಾಗ, ಎಸ್ಪಿ ಠಾಣೆ ತೆರೆಯುವ ಭರವಸೆ ನೀಡಿದರು.
ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಇದೇ ತಿಂಗಳು 19 ಬಾಲ್ಯ ವಿವಾಹಗಳು ನಡೆದಿವೆ. ಪೆÇೀಷಕರು ಮುಚ್ಚಳಿಕೆ ಬರೆದು ಕೊಟ್ಟರೂ ಮತ್ತೆ ಮದುವೆಗಳನ್ನು ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಒಟ್ಟು 74 ಬಾಲ್ಯ ವಿವಾಹಗಳು ನಡೆದಿದ್ದು,ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಅಂಥವರ ಹೆಸರುಗಳನ್ನು ಪಟ್ಟಿ ಮಾಡಿ ಕೊಡಿ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.