
ಹುಬ್ಬಳ್ಳಿ- ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡಲು ಒಪ್ಪದ ಮಗಳಿಗೆ ತಾಯಿ ಹಾಗೂ ಮನೆ ಮಾಲಕತಿ ನಡು ರಸ್ತೆಯಲ್ಲಿಯೇ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿದ್ಯಾನಗರದ ರಂಭಾಪುರಿ ಕಲ್ಯಾಣ ಪಂಟಪದ ಬಳಿ ನಡೆದಿದೆ. ತಾಯಿ ಮಗಳನ್ನು ಬೇರೆಯವರ ಮನೆಗೆಲಸಕ್ಕೆಂದು ಕಳುಹಿಸಿದ್ದಳು. ಆದರೆ ಬಾಲಕಿ ಮನೆಗೆಲಸ ಮಾಡಲು ಒಪ್ಪದೆ ಮರಳಿ ಬಂದಿದ್ದಾಳೆ. ಕೆಲಸ ಮಾಡಲೊಪ್ಪದ ಮಗಳಿಗೆ ತಾಯಿ ಹಾಗೂ ಮನೆ ಮಾಲಕತಿ ನಡು ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಡು ರಸ್ತೆಯಲ್ಲಿ ಎಳೆದಾಡಿ ಹೊಡೆಯುತ್ತಿದ್ದರು, ನೋಡಿಯೋ ನೋಡದಂತೆ ಜನರು ಹೋಗಿದ್ದಾರೆ. ಇನ್ನು ಕೆಲವರು ಬಾಲಕಿಯ ಮೇಲೆ ಹಲ್ಲೆ ಮಾಡುವದು ಹಾಗೆ ಎಳೆದಾಡುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದ್ದು, ತಾಯಿ ಹಾಗೂ ಮನೆ ಮಾಲಕಿಯ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.