
ಬೆಂಗಳೂರು, ಜು.8- ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಟೋ, ಹಳೆಯ ಬಸ್, ಸ್ಕೂಲ್‍ಬಸ್ ಭಾಗಶಃ ಸುಟ್ಟು ಹೋಗಿರುವ ಘಟನೆ ಮಾಗಡಿ ರೋಡ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೆಸ್ಟ್‍ಕೋಟ್ ಹೋಟೆಲ್ ಹಿಂಭಾಗ ಒಂದು ಆಟೋ, ಹಳೆಯ ಬಸ್, ಸ್ಕೂಲ್ ಬಸ್ ನಿಲ್ಲಿಸಲಾಗಿತ್ತು. ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದ್ದು, ಮೂರೂ ವಾಹನಗಳು ಭಾಗಶಃ ಸುಟ್ಟು ಹೋಗಿವೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ. ಮಾಗಡಿ ರೋಡ್ ಠಾಣೆ ಪೆÇಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.