ಆಂಟಿಗುವಾ: ವೇಗಿ ಕೆಮರ್ ರೋಚ್ ಅವರ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲದೇಶ ತಂಡ ಆತಿಥೇಯ ವೆಸ್ಟ್ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ನಲ್ಲಿ ಕೇವಲ 42 ರನ್ಗಳಿಗೆ ಆಲೌಟ್ ಆಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಎರಡನೇ ತಂಡ ಎನಿಸಿದೆ.
ಟಾಸ್ ಸೋತು ಮೊಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ವೇಗಿ ಕೆಮರ್ ರೋಚ್ಗೆ ದಾಳಿಗೆ ತತ್ತರಿಸಿತು. ಆರಂಭಿಕ ಬ್ಯಾಟ್ಸ ಮನ್ ಲಿಟನ್ ದಾಸ್ ಹೊರತುಪಡಿಸಿ 25 ರನ್ ಬರಿಸಿದ್ದು ಬಿಟ್ಟರೇ ತಂಡದ ಉಳಿದೆಲ್ಲಾ ಬ್ಯಾಟ್ಸ್ ಮನ್ಗಳು ಒಂದಂಕಿ ರನ್ಗಲನನ್ ದಾಟಲಿಲ್ಲ. ಕೊನೆಗೆ ಬಾಂಗ್ಲದೇಶ ತಂಡ ತನ್ನ ಮೊದಲ ಇನ್ನಿಂಗ್ಸ್ನ್ನ 18.4 ಓವರ್ಗಳಲ್ಲಿ 43 ರನ್ಗಳಿಗೆ ಅಲೌಟ್ ಆಯಿತು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ವೆಸ್ಟ್ ಇಂಡೀಸ್ಗೆ ಆರಂಭಿಕ ಬ್ಯಾಟ್ಸ್ ಮನ್ಗಳಾದ ಕಾರ್ಲೊಸ್ ಬ್ರಾಥ್ವೈಟ್ (88) ಮತ್ತು ಡ್ವೇನ್ ಸ್ಮಿತ್ (58) ತಲಾ ಅರ್ಧ ಶತಕಗಳ ನೆರವಿನಿಂದ ಭರ್ಜರಿ ಆರಂಭ ಪಡೆಯಿತು. ಪೊವೆಲ್ 48 ರನ್ ಗಳಿಸಿದ್ರು. ವೆಸ್ಟ್ ಇಂಡೀಸ್ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದೆ.