ಪೆÇಲೀಸ್ ಶಸ್ತ್ರಾಸ್ತ್ರ ದಾಸ್ತಾನುಗಳ ಕೊಠಡಿಗಳಿಗೂ ಬರ, ಪ್ರಸ್ತುತ ಇರುವ ಶಸ್ತ್ರಾಸ್ತ್ರಗಳ ಅವಧಿ ಮೀರಿವೆ. 60 ಪೆÇಲೀಸ್ ಠಾಣೆಗಳಲ್ಲಿ ಲಾಕಪ್‍ಗಳೇ ಇಲ್ಲ

 

ಬೆಂಗಳೂರು, ಜು.7- ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಅನೇಕ ಪೆÇಲೀಸ್ ಠಾಣೆಗಳಲ್ಲಿ ಮದ್ದು ಗುಂಡುಗಳಿಲ್ಲ. ಅಗತ್ಯ ಶಸ್ತ್ರಾಸ್ತ್ರಗಳ ಕೊರತೆ, ಶಸ್ತ್ರಾಸ್ತ್ರ ದಾಸ್ತಾನುಗಳ ಕೊಠಡಿಗಳಿಗೂ ಬರ, ಪ್ರಸ್ತುತ ಇರುವ ಶಸ್ತ್ರಾಸ್ತ್ರಗಳ ಅವಧಿ ಮೀರಿವೆ. 60 ಪೆÇಲೀಸ್ ಠಾಣೆಗಳಲ್ಲಿ ಲಾಕಪ್‍ಗಳೇ ಇಲ್ಲ.
ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ಸಿಎಜಿ ಬಿಡಿಸಿಟ್ಟಿದೆ. 2016-17ನೇ ಸಾಲಿನ ಸಿಎಜಿ ವರದಿಯಲ್ಲಿ ಗೃಹ ಇಲಾಖೆಯ ಅನೇಕ ವೈಪಲ್ಯಗಳನ್ನು ಬಟಾಬಯಲು ಮಾಡಿದೆ.
ವರದಿಯಲ್ಲಿ ಪ್ರಮುಖವಾಗಿ ಗೃಹ ಇಲಾಖೆಯ ವೈಫಲ್ಯದಿಂದ ಕರ್ನಾಟಕ ಭಯೋತ್ಪಾದಕರು, ನಕ್ಸಲೀಯರು ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಸುಭದ್ರ ತಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಸಿಎಜಿ ವರದಿಯ ಪ್ರಕಾರ ಗೃಹ ಇಲಾಖೆಯ ನಿರ್ಲಕ್ಷ್ಯ , ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗೃಹ ಇಲಾಖೆ ನಿರ್ಲಕ್ಷ್ಯದಿಂದ ಕೂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೆÇಲೀಸ್ ಇಲಾಖೆಯನ್ನು ತಾಂತ್ರಿಕವಾಗಿ ಸಜ್ಜುಗೊಳಿಸುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದೇ ವಿಫಲವಾಗಿರುವುದರಿಂದಲೇ ಇಲಾಖೆಗೆ ಹಿಡಿದಿರುವ ಗ್ರಹಣ ಬಿಟ್ಟಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ರಾಜ್ಯ ಪೆÇಲೀಸ್ ಪಡೆ ಆಧುನಿಕ ಶಸ್ತ್ರಾಸ್ತ್ರ ಹೊಂದುವಲ್ಲಿ ಇತರೆ ರಾಜ್ಯಗಳಿಗಿಂತಲೂ ಹಿಂದುಳಿದಿದೆ. ಶಸ್ತ್ರಾಸ್ತ್ರಗಳ ಕೊರತೆ ಇರುವುದರಿಂದ ಅಪರಾಧ ಪ್ರಕರಣಗಳು ಮತ್ತು ಅಪರಾಧಿಗಳನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಬಹಳಷ್ಟು ಠಾಣೆಗಳಿಗೆ ಅತ್ಯಗತ್ಯವಾದ ಶಸ್ತ್ರಾಸ್ತ್ರಗಳ ಕೊರತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ದಾಸ್ತಾನು ಕೊಠಡಿಗಳಿಗೂ ಬರವಿದ್ದು ಇರುವ ಶಸ್ತ್ರಾಸ್ತ್ರಗಳ ಅವಧಿ ಮೀರಿದೆ ಎಂದು ಇಲಾಖೆಯ ವೈಫಲ್ಯಗಳನ್ನು ಬೆತ್ತಲು ಮಾಡಿದೆ.
ಮದ್ದುಗುಂಡುಗಳಿಲ್ಲ:
ರಾಜ್ಯದ 18 ಪೆÇಲೀಸ್ ಠಾಣೆಗಳಲ್ಲಿ ಮದ್ದುಗುಂಡುಗಳೇ ಇಲ್ಲದ ಪರಿಸ್ಥಿತಿಯಿದ್ದು, ಜೊತೆಗೆ 60 ಠಾಣೆಗಳಲ್ಲಿ ಲಾಕಪ್‍ಗಳೂ ಇಲ್ಲದಂತಾಗಿದೆ. ಶೌಚಾಲಯಗಳು, ಸಾಕ್ಷಿ ವಿಚಾರಣೆ ಕೊಠಡಿಗಳು, ಶಸ್ತ್ರಾಸ್ತ್ರಗಳನ್ನು ಇಡಲು ಬೇಕಾದ ಕಟ್ಟಡಗಳು ಸೂಕ್ತವಾಗಿಲ್ಲ ಎಂದು ಹೇಳಿದೆ.
ಶಸ್ತ್ರಾಸ್ತ್ರಗಳು ಮತ್ತು ಸಂಪರ್ಕ ಉಪಕರಣಗಳ ಖರೀದಿಯಲ್ಲಿನ ಕೊರತೆ ಪೆÇಲೀಸ್ ಪಡೆಗಳ ತರಬೇತಿ ಕೊರತೆಯಿಂದ ಇಲಾಖೆಯ ಆಧುನೀಕರಣದ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ.
ಶಸ್ತ್ರಾಸ್ತ್ರ ಗಳನ್ನು 2011-13ರಿಂದ 2016-17 ಅವಧಿಯಲ್ಲಿ ಖರೀದಿಸಿದ್ದರೂ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಿಲ್ಲ. ಪ್ರತಿ ಪೆÇಲೀಸ್ ಠಾಣೆಗೂ 0.303 ಟ್ರಿಂಕೇಟೆಡ್ ರೈಫೆಲ್‍ಗಳ ಗರಿಷ್ಠ ಪ್ರಮಾಣದ ಕೊರತೆ ಕಂಡುಬಂದಿದೆ.
ಎಕೆ 47 ಅಸಾಲ್ಟ್ ರೈಫಲ್‍ಗಳ ಖರೀದಿಗೆ 7.30 ಕೋಟಿ ರೂ.ಗಳನ್ನು ಸಿಆರ್‍ಪಿಎಫ್‍ಗೆ 2015ರಲ್ಲೇ ಪಾವತಿ ಮಾಡಲಾಗಿದೆ.ಆದರೂ ಇಲಾಖೆಗಳಿಗೆ ಏಕೆ ಸರಬರಾಜು ಮಾಡಿಲ್ಲ ಎಂದು ವರದಿ ಪ್ರಶ್ನಿಸಿದೆ.
ಅಸಾಲ್ಟ್ ರೈಫಲ್‍ಗಳು ಬೇಕಿದ್ದುದು 400.ಆದರೆ ಯಾವ ಉದ್ದೇಶದಿಂದ 1200 ರೈಫೆಲ್‍ಗಳನ್ನು ಅಧಿಕವಾಗಿ ಖರೀದಿಸಲಾಗಿದೆ.ಇತರೆ ವರ್ಗಗಳ ಶಸ್ತ್ರಾಸ್ತ್ರಗಳು, ಬಿಡಿ ಭಾಗಗಳು, ಲೇಸರ್ ಸೈಟ್, ಡಿವೈಸ್, ಕಾರ್ನರ್ ಶಾರ್ಟ್, ವಿಸಿನ್‍ಸೈಟ್, ಗ್ರಾನೈಡ್‍ಗಳು ಸೇರಿದಂತೆ ಮತ್ತಿತರ ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸಿಯೇ ಇಲ್ಲ ಎಂದು ಹೇಳಿದೆ.
ತರಬೇತಿಯೇ ಇಲ್ಲ :
ರಾಜ್ಯದ ಅನೇಕ ಠಾಣೆಗಳು ಪೆÇಲೀಸ್ ಇಲಾಖೆಗೆ ಹಾಗೂ ಸಬ್‍ಇನ್‍ಸ್ಪೆಕ್ಟರ್‍ಗಳಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ತರಬೇತಿಯನ್ನೇ ನೀಡಿಲ್ಲ. ಎಕೆ47 ರೈಫಲ್‍ಗಳು ಲಭ್ಯವಾಗಿದ್ದರೂ ಎಸ್‍ಎಲ್‍ಆರ್ ಪಿಸ್ತೂಲ್‍ಗಳಲ್ಲೇ ಫೈರಿಂಗ್ ಅಭ್ಯಾಸ ಮಾಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.
ಆಧುನಿಕ ಶಸ್ತ್ರಾಸ್ತ್ರಗಳನ್ನು ನಿಭಾಯಿಸಲು ಪೆÇಲೀಸ್ ಇನ್‍ಸ್ಪೆಕ್ಟರ್‍ಗಳಿಗೆ ಅವಕಾಶ ಇಲ್ಲದಂತಾಗಿದೆ.ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಅರ್ಹತೆ ಹೊಂದಿರುವ ತಾಂತ್ರಿಕ ಸಿಬ್ಬಂದಿ ಇಲ್ಲವೇಇಲ್ಲ ಎಂದು ಸಿಎಜಿ ಉಲ್ಲೇಖ ಮಾಡಿದೆ.
ಬೆಳಗಾವಿ, ಮೈಸೂರುಮತ್ತು ತುಮಕೂರು ಜಿಲ್ಲೆಗಳಲ್ಲಿ ಫೈರಿಂಗ್ ಅಭ್ಯಾಸ ನಡೆಸಲು ತಮ್ಮದೇ ಆದ ಫೈರಿಂಗ್ ವಲಯವೂ ಇಲ್ಲ.ತುಮಕೂರು ಜಿಲ್ಲೆಯಲ್ಲಿ ಫೈರಿಂಗ್ ಅಭ್ಯಾಸ ನಡೆಸಲು 5 ಎಕರೆ ಭೂಮಿ ಹಂಚಿಕೆ ಮಾಡಿದ್ದರೂ ಖಾಸಗಿ ಭೂಮಿಯಲ್ಲಿ ಅಭ್ಯಾಸ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ನಕ್ಸಲ್ ನಿಗ್ರಹ ಪಡೆ, ವಿಶೇಷ ಕಾರ್ಯತಂತ್ರ ಪಡೆಗಳ ಕಾರ್ಯ ನಿರ್ವಹಣೆಗೂ ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.ರಾಜ್ಯದಲ್ಲಿ 14 ನಕ್ಸಲ್ ನಿಗ್ರಹ ಪಡೆಗಳಿದ್ದರೂ ಶೇ.50ರಷ್ಟು ಸಿಬ್ಬಂದಿಗೆ ತರಬೇತಿಯನ್ನೇ ಕೊಟ್ಟಿಲ್ಲ. ಕಾರ್ಕಳದಲ್ಲಿ 2.02 ಕೋಟಿ ರೂ.ವೆಚ್ಚದಲ್ಲಿ ಜಂಗಲ್ ಕ್ಯಾಂಪ್‍ನ್ನು ನಿಗದಿತ ಅವಧಿಯೊಳಗೆ ಸ್ಥಾಪನೆ ಮಾಡುವಲ್ಲಿ ಸರ್ಕಾರದಿಂದಲೇ ವೈಫಲ್ಯವಾಗಿದೆ ಎಂದು ಹೇಳಿದೆ.
ಗೃಹ ಇಲಾಖೆಯಲ್ಲಿ ಸಮನ್ವಯದ ಕೊರತೆ, ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಇಲಾಖೆಯ ಯಶಸ್ಸು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ ಎಂಬುದನ್ನು ಪತ್ತೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ